Top

ತಹಶೀಲ್ದಾರ್​ಗೆ ತಲೆ ಸರಿಯಿಲ್ಲ - ಸಚಿವ ಕೆ.ಎಸ್​ ಈಶ್ವರಪ್ಪ ಆಕ್ರೋಶ

ಮುಸ್ಲಿಂ ಯುವಕರಿಗೂ ಪೆಟ್ಟಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಇಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಆಗಿದೆ ಅಷ್ಟೇ.

ತಹಶೀಲ್ದಾರ್​ಗೆ ತಲೆ ಸರಿಯಿಲ್ಲ - ಸಚಿವ ಕೆ.ಎಸ್​ ಈಶ್ವರಪ್ಪ ಆಕ್ರೋಶ
X

ಶಿವಮೊಗ್ಗ: ಶಿವಮೊಗ್ಗದಲ್ಲಿ ಮುಸಲ್ಮಾನ್ ಕುತಂತ್ರಿಗಳು ಗಲಭೆ ಉಂಟು ಮಾಡುವ ಪ್ರಯತ್ನ ಮಾಡಿಕೊಂಡೇ ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಎರಡು ಗುಂಪಿನ ನಡುವೆ ಗಲಭೆ ನಡೆದ ಗಲಭೆ ಬಗ್ಗೆ ಮಾತನಾಡಿದ ಅವರು, ನಾವು ಹಿಂದೂ ಸಮಾಜದ ಯುವಕರನ್ನು ನಾವು ಸಮಾಧಾನ ಮಾಡುತ್ತಲೇ ಬಂದಿದ್ದೇವೆ. ಹಿಂದೂ ಯುವಕರು ಶಾಂತಿಯಿಂದಲೇ ಇದ್ದರು. ಆದರೆ, ಇದೀಗ ಭಜರಂಗದಳದ ಸಹ ಸಂಚಾಲಕ ನಾಗೇಶ್ ಮೇಲೆ ಮೊದಲೇ ಯೋಜನೆ ರೂಪಿಸಿ ಹೇಡಿಗಳ ರೀತಿ ಒಬ್ಬನ ಮೇಲೆ ನಾಲ್ವರು ಮುಸಲ್ಮಾನ್ ಗುಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಹಿಂದೂ ಸಮಾಜ ಎಷ್ಟು ತಡೆದುಕೊಳ್ಳಬೇಕೋ ಅಷ್ಟು ತಡೆದುಕೊಳ್ಳುತ್ತದೆ. ಮುಸ್ಲಿಂ ಸಮಾಜದ ದುಷ್ಟ ಶಕ್ತಿಗಳು ಹಾಗೂ ಹೊರಗಿನಿಂದ ಬಂದ ದುಷ್ಟ ಶಕ್ತಿಗಳಿಗೆ ಶಿವಮೊಗ್ಗ ಶಾಂತವಾಗಿರುವುದು ಬೇಕಾಗಿಲ್ಲ. ಈ ಘಟನೆಗೆ ಕಾರಣವಾಗಿರುವ ಗೂಂಡಾಗಳನ್ನು ನಮ್ಮ ಸರ್ಕಾರ ಸುಮ್ಮನೆ ಬಿಡುವುದಿಲ್ಲ. ನಾಗೇಶ್ ಗೋ ಹತ್ಯೆ ತಡೆಯಲು ಪ್ರಯತ್ನಿಸುತ್ತಿದ್ದ ಯುವಕ. ಮುಸ್ಲಿಂ ಗೂಂಡಾಗಳಿಗೆ ಆ ಸಮುದಾಯದ ಮುಖಂಡರೇ ಬುದ್ಧಿ ಹೇಳಿ ಶಿಕ್ಷೆ ಕೊಡಬೇಕು. ನೀವು ಬುದ್ಧಿ ಹೇಳಿ ಶಿಕ್ಷೆ ಕೊಡದಿದ್ದರೆ ಸರ್ಕಾರ ಮುಸ್ಲಿಂ ಗೂಂಡಾಗಳಿಗೆ ಬುದ್ಧಿಯನ್ನು ಹೇಳುತ್ತೇವೆ ಶಿಕ್ಷೆಯನ್ನು ನೀಡುತ್ತೇವೆ ಎಂದು ವಾರ್ನಿಂಗ್​ ಕೊಟ್ಟಿದ್ದಾರೆ.

ಸದ್ಯ ಮುಸ್ಲಿಂ ಯುವಕರಿಗೂ ಪೆಟ್ಟಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಇಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಆಗಿದೆ ಅಷ್ಟೇ. ಗೂಂಡಾಗಿರಿಗೆ ಪ್ರತಿಯಾಗಿ ಗೂಂಡಾಗಿರಿ ನಡೆದಿದೆ. ತಾಳ್ಮೆಗೂ ಒಂದು ಮಿತಿ ಇರುತ್ತದೆ. ತಾಳ್ಮೆ ಮೀರಿದರೆ ಪರಿಸ್ಥಿತಿ ಕಷ್ಟವಾಗುತ್ತದೆ. ಮುಸಲ್ಮಾನ್ ಗೂಂಡಾಗಿರಿ ಶಿವಮೊಗ್ಗದಲ್ಲಿ ನಡೆಯಲ್ಲ. ಅವರ ಗೂಂಡಾಗಿರಿಯಿಂದ ಶಿವಮೊಗ್ಗದಲ್ಲಿ ವ್ಯಾಪಾರಕ್ಕೆ ನಷ್ಟವಾಗುತ್ತಿದೆ. ಇಲ್ಲಿ ನಡೆದಿರುವ ಘಟನೆ ಪೂರ್ವನಿಯೋಜಿತವಾದುದು. ಗೋ ಪಾಳದಲ್ಲಿ ಮೂವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರ ಬಂಧನವಾಗಿದೆ. ಗೋ ಹತ್ಯೆ ತಡೆಯುತ್ತಾನೆ ಎಂಬ ಕಾರಣಕ್ಕೆ ನಾಗೇಶ್ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿದರು.

ಇನ್ನು ತಹಸೀಲ್ದಾರ್​ಗೆ ತಲೆ ಸರಿಯಿಲ್ಲ. ಎರಡು ಕೋಮಿನ ಮಧ್ಯೆ ಗಲಭೆಯಾಗಿದೆ ಎಂದಿದ್ದಾರೆ. ಆದರೆ, ಒಬ್ಬ ಹೋಗುವಾಗ ನಾಲ್ಕು ಜನ ಬಂದು ಹೊಡೆದರೆ ಅದು ಮುಸಲ್ಮಾನ್ ಗೂಂಡಾಗಿರಿ. ಅದನ್ನು ಮೊದಲು ಅವರು ತಿಳಿದುಕೊಳ್ಳಬೇಕು. ಈ ಘಟನೆಯಲ್ಲಿ ಹಿಂದೂ ಯುವಕರ ತಪ್ಪೇನಿದೆ(?) ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಅವರು ಮಾತನಾಡಿದ್ದಾರೆ.

Next Story

RELATED STORIES