Top

ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧ ಯಾವುದೇ ಕ್ರಮ ಇಲ್ಲ - ಸಚಿವ ಕೆ.ಎಸ್​ ಈಶ್ವರಪ್ಪ

ಯಾವುದೇ ಒಂದು ಹೇಳಿಕೆ ಜನ ಹಾಗೂ ಪಕ್ಷಕ್ಕೂ ಸೀರಿಯಸ್ ಆಗಬೇಕು. ಆದರೆ, ಅದು ಆಗುತ್ತಿಲ್ಲ.

ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧ ಯಾವುದೇ ಕ್ರಮ ಇಲ್ಲ - ಸಚಿವ ಕೆ.ಎಸ್​ ಈಶ್ವರಪ್ಪ
X

ಶಿವಮೊಗ್ಗ: ರಾಜ್ಯದ ನಾಯಕರು ಇದನ್ನು ಗಮನಿಸುತ್ತಿದ್ದಾರೆ ಅದನ್ನು ಸರಿಪಡಿಸುತ್ತಾರೆ. ನಾನು ಸಹ ಅವರ ಜೊತೆ ಮಾತನಾಡಿದ್ದೇನೆ. ಅದ್ರೂ ಮತ್ತೆ ಹೀಗೆ ಮಾತನಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶನಿವಾರ ಹೇಳಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಅವರ ನಾಯಕತ್ವ ಬದಲಾವಣೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಯತ್ನಾಳ್​ ಹೇಳಿಕೆಯನ್ನು ಬಿಜೆಪಿ ಜೊತೆಗೆ ಜನರೂ ಸಹ ಸೀರಿಯಸ್ ಆಗಿ ತಗೋತ್ತಿಲ್ಲ. ಅವರು ಸಹ ನಮ್ಮ ಪ್ರಮುಖ ನಾಯಕರು. ಪಕ್ಷ ಹಾಗೂ ಸರ್ಕಾರಕ್ಕೆ ಡ್ಯಾಮೇಜ್ ಆಗುವ ಬಗ್ಗೆ ಅವರಿಗೆ ಗೊತ್ತಿದೆ ಎಂದರು.

ಯತ್ನಾಳ್​ ಒಳ್ಳೆಯ ನಾಯಕ. ಕಠೋರ ಹಿಂದುತ್ವಾವಾದಿ. ಆದರೆ, ಹೇಳಿಕೆ ಕೊಟ್ಟು ಮುಜುಗರಕ್ಕೆ ಸಿಲುಕುತ್ತಾರೆ. ಯಾವುದೇ ಒಂದು ಹೇಳಿಕೆ ಜನ ಹಾಗೂ ಪಕ್ಷಕ್ಕೂ ಸೀರಿಯಸ್ ಆಗಬೇಕು. ಆದರೆ, ಅದು ಆಗುತ್ತಿಲ್ಲ. ಅವರ ವಿರುದ್ಧ ಯಾವುದೇ ಕ್ರಮ ಇಲ್ಲ. ಆದರೆ, ಕರೆದು ಮಾತನಾಡುತ್ತೇವೆ ಎಂದು ಹೇಳಿದರು.

ಇನ್ನು ರೈತರ ಹೋರಾಟ ಒಂದು ರಾಜಕೀಯ ಷಡ್ಯಂತ್ರ. ದೇಶದ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಅದಕ್ಕೆ ಕಾಯ್ದೆ ಮೂಲಕ ಅವಕಾಶ ಮಾಡಿಕೊಡಲಾಗಿದ್ದು, ರೈತರು ಒಪ್ಕೊಂಡಿದ್ದಾರೆ. ಕುತಂತ್ರದ ರಾಜಕಾರಣಿಗಳು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇದು ಬಹಳ ದಿನ ನಡೆಯಲ್ಲ. ಇದು ಕಾಂಗ್ರೆಸ್ ಪ್ರೇರಿತ ರೈತರ ಹೋರಾಟ ಎಂದು ಕಾಂಗ್ರೆಸ್​ ವಿರುದ್ಧ ಆರೋಪ ಮಾಡಿದರು.

ಸದ್ಯ ಭದ್ರಾವತಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರುವ ಸಾಧ್ಯತೆಯಿದೆ. ಜನವರಿಯಲ್ಲಿ ಬರಲಿದ್ದು, ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆರ್​ಎಎಫ್​ ಘಟಕ ಸ್ಥಾಪನೆ ಸಂಬಂಧ ಬರುವ ನಿರೀಕ್ಷೆಯಿದೆ ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಅವರು ಹೇಳಿದರು.

Next Story

RELATED STORIES