Top

ಭಾರತ ಬಂದ್​ನಂತಹ ಕಟು ನಿರ್ಧಾರ ಕೈಗೊಳ್ಳುವುದು ಸರಿಯಲ್ಲ- ಸಿಎಂ ಬಿಎಸ್​ವೈ

ಪ್ರಧಾನಿಗಳೇ ರೈತರನ್ನು ಕರೆದು ಸಮಾಧಾನ ಮಾಡಲು ಮುಂದಾದರೂ ಕೆಲವರು ಹಠ ಮಾಡುತ್ತಿದ್ದಾರೆ

ಭಾರತ ಬಂದ್​ನಂತಹ ಕಟು ನಿರ್ಧಾರ ಕೈಗೊಳ್ಳುವುದು ಸರಿಯಲ್ಲ- ಸಿಎಂ ಬಿಎಸ್​ವೈ
X

ಶಿವಮೊಗ್ಗ: ಇಂದಿನಿಂದ ಅಧಿವೇಶನ ಆರಂಭಗೊಂಡಿದೆ. ಅನೇಕ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಹೇಳಿದರು.

ಇಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇವೆ. ಗೋಹತ್ಯೆ ನಿಷೇಧ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ ಎಂದಿದ್ದಾರೆ

ಸದ್ಯ ನಾಳೆ ಅಥವಾ ನಾಡಿದ್ದು ಮತ್ತೊಮ್ಮೆ ಇದೇ ಮಸೂದೆ ಮಂಡನೆ ಮಾಡಿ ಅಂಗೀಕಾರ ಮಾಡುತ್ತೇವೆ. ಇದರ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇನ್ನು ಪ್ರಧಾನಿಗಳೇ ರೈತರನ್ನು ಕರೆದು ಸಮಾಧಾನ ಮಾಡಲು ಮುಂದಾದರೂ ಕೆಲವರು ಹಠ ಮಾಡುತ್ತಿದ್ದಾರೆ. ಈ ರೀತಿ ಬಂದ್ ಮಾಡುವುದರಿಂದ ಅರ್ಥವಿಲ್ಲ. ನರೇಂದ್ರ ಮೋದಿ ಸರ್ಕಾರ ರೈತರ ಪರವಾಗಿದೆ ಎಂದು ಹೇಳಿದ್ದಾರೆ.

ಮಾತುಕತೆ ಮೂಲಕ ಸಮಸ್ಯೆಗಳಿದ್ದರೆ ಹಂತಹಂತವಾಗಿ ಬಗೆಹರಿಸಿಕೊಳ್ಳಬೇಕು. ಭಾರತ ಬಂದ್ ನಂತಹ ಕಟು ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಸಿಎಂ ಬಿಎಸ್​ವೈ ಅವರು ಬಂದ್​​ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Next Story

RELATED STORIES