Top

ನಾನು ಹೆದರಿಕೆಗೆ, ಬೆದರಿಕೆಗೆ ಬಗ್ಗುವವನಲ್ಲ

ಸಿಎಂಗಳ ಹೇಳಿಕೆಯನ್ನು ನಾನು ಖಂಡಿಸುತ್ತೇನೆ.

ನಾನು ಹೆದರಿಕೆಗೆ, ಬೆದರಿಕೆಗೆ ಬಗ್ಗುವವನಲ್ಲ
X

ಶಿವಮೊಗ್ಗ: ನಾನು ಇದುವರೆಗೂ ಎಲ್ಲಿಯೂ ನನ್ನ ಬಳಿ 19 ಸಿಡಿಗಳಿವೆ ಎಂದು ಪ್ರಸ್ತಾಪವೇ ಮಾಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರು ಬುಧವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿ, ಈ ಬಗ್ಗೆ ಒಂದೇ ಒಂದು ದಾಖಲೆ ಇದ್ದರೂ ನನಗೆ ಕೊಡಿ. ಸಿಡಿ ಇವೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದಿದ್ದಾರೆ.

ರಮೇಶ್ ಜಾರಕಿಹೊಳಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ಇದೊಂದು ದೊಡ್ಡ ಷಡ್ಯಂತ್ರ. ಸಂಬಂಧಪಟ್ಟ ಸಚಿವರ ವಿರುದ್ಧ ಷಡ್ಯಂತ್ರ ನಡೆದಿದೆ. ಸಚಿವರ ಬೆಳವಣಿಗೆಯನ್ನು ಸಹಿಸದ ಕೆಲವರು ಷಡ್ಯಂತ್ರ ನಡೆಸಿದ್ದಾರೆ ಎಂದು ಹೇಳಿದರು.

ಸದ್ಯ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ಶಾಸಕರುಗಳು ತಾಂತ್ರಿಕವಾಗಿ ಮುಗ್ದರಾಗಿದ್ದಾರೆ. ಅವರೆಲ್ಲರೂ ಬಹಳ ಎಚ್ಚರಿಕೆ ಯಿಂದಿರಬೇಕು. ಎಲ್ಲಿಯೂ ಮೈ ಮರೆಯಬಾರದು. ರಾಜಕಾರಣಿಗಳು ಬೆಳಗಾವಿ ಅಧಿವೇಶನಕ್ಕೆ ಬಂದು ಶನಿವಾರ, ಭಾನುವಾರವಾದ ಕೂಡಲೇ ಗೋವಾಕ್ಕೆ ತೆರಳುತ್ತಾರೆ. ಈ ರೀತಿ ಅವರು ಮಾಡಬಾರದು. ಅವರು ಅವರ ಎಚ್ಚರಿಕೆಯಲ್ಲಿ ಇರಬೇಕು. ನಾಳೆ ಎಲ್ಲಿಯಾದರೂ ಮತ್ತೆ ಸಿಕ್ಕಿಹಾಕಿಕೊಳ್ಳುವ ಸಂಭವವಿರುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

ನಿಷ್ಠಾವಂತ ಪ್ರಾಮಾಣಿಕ ಹೋರಾಟಗಾರರು ಕೇವಲ ಬೆರಳೇಣಿಕಯಷ್ಟು ಜನರಿದ್ದಾರೆ. ನ್ಯಾಯಬದ್ಧವಾಗಿ ವ್ಯವಸ್ಥಿತವಾಗಿ ಹೋರಾಟ ಮಾಡಿದರೆ, ಖಂಡಿತ ಗೆಲುವು ಸಿಗಲಿದೆ. ಸಚಿವರ ಪ್ರಕರಣದಲ್ಲಿ, ಸಂತ್ರಸ್ಥೆ ಆಗಲೀ ಅವರ ಗಂಡನಾಗಲೀ ದೂರು ನೀಡಿಲ್ಲ. ಅವರ್ಯಾರು ದೂರು ನೀಡಿಲ್ಲವಾದ್ರೆ ಈ ಪ್ರಕರಣವೂ ಅಲ್ಲಿಯೇ ಅಂತ್ಯವಾಗಲಿದೆ ಎಂದು ಮಾತನಾಡಿದ್ದಾರೆ.

ಸದ್ಯ ಬೆಂಗಳೂರಿನ ಕಬ್ಬನ್​ ಪೇಟೆ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ ಎಂಬುದು ತಿಳಿದುಬಂದಿದೆ. ನನಗೆ ವಾಟ್ಸಪ್ ಮೂಲಕ ನೋಟಿಸ್ ಬಂದಿದೆ. ನಾನು ನನ್ನದೇ ಆದ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಹೋಗುತ್ತೇನೆ ಎಂದು ತಿಳಿಸಿದರು.

ಹಾದಿಬೀದಿಯಲ್ಲಿ ಹೋಗುವವರೆಲ್ಲ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳುತ್ತಾರೆ ಎಂದು ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಾರೆ. ಸಿಎಂಗಳ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಒಬ್ಬ ಘನತೆವೆತ್ತ ಮುಖ್ಯಮಂತ್ರಿಗಳು ಈ ರೀತಿ ಮಾತನಾಡಬಾರದು. ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಈ ರೀತಿ ಹೇಳಿರುವುದು ತಪ್ಪು. ಆರ್​ಟಿಇನಲ್ಲಿ ದನ ಕಾಯುವನಿಂದ ಹಿಡಿದು ಯಾರು ಬೇಕಾದರೂ ತೆಗೆದುಕೊಳ್ಳಬಹುದು. ಬುದ್ಧಿವಂತರೇ ಕೇಳಬೇಕಂತೇನೂ ಇಲ್ಲ, ಅನಕ್ಷರಸ್ಥ ಕೂಡ ಮಾಹಿತಿ ಕೇಳಬಹುದು. ಹೋರಾಟಗಾರರನ್ನು ಈ ರೀತಿ ಹತ್ತಿಕ್ಕುವ ಪ್ರಯತ್ನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಾನು ಸಾಕಷ್ಟು ಈ ರೀತಿ ನೋಡಿಕೊಂಡು ಬಂದಿದ್ದೇನೆ. ನಾನು ಆಸೆ, ಆಮೀಷಗಳಿಗೆ ಬಲಿಯಾಗದೇ, ಕಾನೂನು ವ್ಯಾಪ್ತಿಯಲ್ಲಿ ನನ್ನ ಕೆಲಸ ಮಾಡುತ್ತಿದ್ದೇನೆ. ನಾನು ಹೆದರಿಕೆಗೆ, ಬೆದರಿಕೆಗೆ ಬಗ್ಗುವವನಲ್ಲ ಎಂದು ರಾಜಶೇಖರ ಮುಲಾಲಿಯವರು ಮಾತನಾಡಿದ್ದಾರೆ.

Next Story

RELATED STORIES