Top

ಸಕಲೇಶಪುರದಲ್ಲಿ ಸಿಕ್ಕಿದ ಆನೆ ಮರಿಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ

ಎದ್ದೇಳಲು ಸಾಧ್ಯವಾಗದ ಆ ಮರಿಗೆ ಇದೀಗ ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಸಕಲೇಶಪುರದಲ್ಲಿ ಸಿಕ್ಕಿದ ಆನೆ ಮರಿಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ
X

ಶಿವಮೊಗ್ಗ: ಸಕಲೇಶಪುರ ತಾಲೂಕಿನಲ್ಲಿ ಸಿಕ್ಕ ಎರಡು ವಾರ ಪ್ರಾಯದ ಆನೆ ಮರಿ. ಆದರೆ, ಹುಟ್ಟುವಾಗಲೇ ಅದಕ್ಕೆ ಆರೋಗ್ಯ ಕೈಕೊಟ್ಟಿತ್ತು. ಇದರಿಂದಾಗಿ ಹೆತ್ತತಾಯಿಯಿಂದಲೂ ದೂರವಾಗಿತ್ತು. ಎದ್ದೇಳಲು ಸಾಧ್ಯವಾಗದ ಆ ಮರಿಗೆ ಇದೀಗ ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾಮಾನ್ಯವಾಗಿ ಆನೆ ಮರಿ ಹಾಕಿದಾಗ ಆ ಮರಿ ಕೇವಲ ಅರ್ಧ ಗಂಟೆಯಲ್ಲೇ ಎದ್ದು ಓಡಾಡಲಾ ರಂಭಿಸುತ್ತದೆ. ಆದರೆ, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸಿಕ್ಕ ಆನೆ ಮರಿ ಎರಡು ವಾರವಾದರೂ ಓಡಾಡಲೂ ಸಾಧ್ಯವಾಗುತ್ತಿರಲ್ಲ. ಮರಿಯು ಹಿಂಗಾಲಿನ ನರದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಏಳಲು ಸಾಧ್ಯವಾಗಿರಲಿಲ್ಲ. ಎರಡು ದಿನವಾದರೂ ತನ್ನ ಮರಿ ಎದ್ದು ಓಡಾಡದಿದ್ದಾಗ ತಾಯಿ ಆನೆ ಮರಿಯನ್ನು ಬಿಟ್ಟು ಹೋಗಿದೆ. ಇದನ್ನು ಗಮನಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಮರಿಯನ್ನು ರಕ್ಷಿಸಿದ್ದಾರೆ. ಆನೆ ಮರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸಕ್ರೆಬೈಲಿನ ಆನೆ ಬಿಡಾರಕ್ಕೆ ಇದೀಗ ಕರೆತರಲಾಗಿದೆ.

ಹುಟ್ಟುವಾಗಲೇ ಆನೆ ಮರಿಯಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ಆನೆ ಮರಿಯ ಹಿಂಭಾಗದ ಕಾಲುಗಳಲ್ಲಿ ನರದೌರ್ಬಲ್ಯ ಕಾಣಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಆನೆ ಮರಿಗೆ ಎದ್ದೇಳಲೂ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಮರಿಗೆ ತಾಯಿ ಹಾಲು ಸಿಗದ ಕಾರಣ ನಿಶಕ್ತವಾಗಿದೆ. ಇದರಿಂದಾಗಿ ಮರಿಯ ಮುಂದಿನ ಕಾಲು ಸಹ ನೋವಿಗೆ ಒಳಗಾಗಿದೆ. ಹೀಗಾಗಿ ಆನೆ ಮರಿಗೆ ಶಕ್ತಿ ವೃದ್ಧಿಸುವ ಉದ್ದೇಶದಿಂದ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ. ಜೊತೆಗೆ ಆನೆ ಮರಿಯ ಕಾಲಿನ ನರದ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ನಿರಂತರವಾಗಿ ಆನೆ ಮರಿಯ ಕಾಲನ್ನು ಮಸಾಜ್ ಮಾಡಲಾಗುತ್ತಿದೆ.

ತಾಯಿಯಿಂದ ದೂರವಾಗಿರುವ ಎರಡು ವಾರದ ಆನೆ ಮರಿಯ ಆರೋಗ್ಯ ಬೇಗನೆ ವೃದ್ದಿಸುವ ಸಲುವಾಗಿ ವೈದ್ಯರ ತಂಡ ನಿರಂತ ಕೆಲಸ ಮಾಡುತ್ತಿದೆ. ಮಾತ್ರವಲ್ಲದೇ ಮರಿಯ ಆರೈಕೆಗಾಗಿ ಇಬ್ಬರು ಮಾವುತ ಹಾಗೂ ಕಾವಾಡಿಯನ್ನು ಸಹ ನೇಮಿಸಲಾಗಿದ್ದು, ಎಲ್ಲಾ ಆನೆ ಮರಿಗಳಂತೆ ಕುಣಿದಾಡುತ್ತಾ ಸಕ್ರೆಬೈಲು ಆನೆ ಬಿಡಾರದ ಅಂದವನ್ನು ಇನ್ನಷ್ಟು ಹೆಚ್ಚಿಸಲಿ ಎಂಬುದು ನಮ್ಮ ಆಶಯ.

Next Story

RELATED STORIES