Top

'ಸಿಗಂದೂರು ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಬಿಎಸ್​ವೈಗೆ ದೇವಿ ಶಾಪ ತಟ್ಟಿದೆ'

ಸಿಎಂ ಬಿ.ಎಸ್​ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಸರ್ಕಾರಕ್ಕೆ ಕಣ್ಣು, ಕಿವಿ, ಇಲ್ಲ

ಸಿಗಂದೂರು ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಬಿಎಸ್​ವೈಗೆ ದೇವಿ ಶಾಪ ತಟ್ಟಿದೆ
X

ಶಿವಮೊಗ್ಗದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಶಿವಮೊಗ್ಗ: ಹೊಸ ವರ್ಷಾಚರಣೆ ಸರ್ಕಾರ ನಿಷೇಧ ಹೇರಿರುವುದು ಖಂಡನೀಯ ಎಂದು ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಿಎಂ ಬಿಎಸ್​ವೈ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಮಾಧ್ಯಮ ಮಿತ್ರರರೊಂದಿಗೆ ಮಾತನಾಡಿದ ಅವರು, ಯುವ ಪೀಳಿಗೆಯ ಸಂಭ್ರಮಾಚರಣೆಗೆ ಕಡಿವಾಣ ಹಾಕುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಆರ್​ಎಸ್​ಎಸ್​ ಪ್ರೇರಿತ ಸಿದ್ಧಾಂತಗಳನ್ನು ಸರ್ಕಾರ ಜಾರಿಗೊಳಿಸಲು ಮುಂದಾಗಿದೆ ಇದರ ಭಾಗವಾಗಿ ಕ್ರಿಸ್​ಮಸ್​ ಆಚರಣೆಗೆ ಗುಂಪು ಗೂಡುವುದನ್ನು ನಿಷೇಧಿಸಿತು. ಇದೀಗ ಯುವಕರ ಹೊಸ ವರ್ಷಾಚರಣೆಗೆ ಕಡಿವಾಣ ಹಾಕುತ್ತಿದೆ ಎಂದರು.

ಸದ್ಯ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಸರ್ಕಾರಕ್ಕೆ ಕಣ್ಣು, ಕಿವಿ, ಇಲ್ಲ. ಆರ್​ಆರ್​ ನಗರ ಉಪಚುನಾವಣೆ ವೇಳೆಯಲ್ಲಿ 20 ಸಾವಿರ ಜನರ ಸೇರಿಸಿ ಸಭೆ, ಮೆರವಣಿಗೆ ಮಾಡಿದರು. ಆವಾಗ ಸರ್ಕಾರಕ್ಕೆ ಕೊರೊನಾ ನೆನಪು ಇರಲಿಲ್ಲವೇ(?) ಬಿಎಸ್​ವೈ ಏನು ತಜ್ಞರೇ. ಯಾರಿಗೂ ಹೇಳದೆ-ಕೇಳದೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿದರು. ಆದರೆ ಮರುದಿನವೇ ಅದನ್ನು ಹಿಂತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಸಿಗಂದೂರು ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಯಡಿಯೂರಪ್ಪರಿಗೆ ದೇವಿಯ ಶಾಪ ತಟ್ಟಿದೆ. ಅದಕ್ಕಾಗಿ ಡಿನೋಟಿಫಿಕೇಷನ್ ಪ್ರಕರಣ ಹೆಗಲೇರಿದೆ. ಹಾಗಾಗಿ ನಾನು ಅವರ ರಾಜೀನಾಮೆ ಕೇಳುವುದಿಲ್ಲ. ಅವರ ಪಕ್ಷದವರೇ ಯಡಿಯೂರಪ್ಪ ಬಗ್ಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

ಜನವರಿ 16ರ ನಂತರ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಸಂಕ್ರಮಣದ ನಂತರ ಹೊಸ ರಾಜಕೀಯ ತಿರುವು ಅಗಲಿದೆ. ನಾನು ಯಾವುದೇ ಭ್ರಷ್ಟಾಚಾರದ ಆಪಾಧಿತರನ್ನು ನಾನು ಇಟ್ಟುಕೊಳ್ಳು ವುದಿಲ್ಲ ಎಂದು ಪ್ರಧಾನಿ ಹೇಳಿದ್ದರು. ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ 15 ರಿಂದ 20 ಸಾವಿರ ಹಣ ನೀಡಿ ಮತ ಖರೀದಿಸಿದೆ. ಭ್ರಷ್ಟಾಚಾರದ ಹಣದ ಹೊಳೆಯನ್ನೇ ಯಡಿಯೂರಪ್ಪ ಸರ್ಕಾರ ಈ ಬಾರಿಯ ಚುನಾವಣೆಯಲ್ಲಿ ಹರಿಸಿದೆ. ಈ ಬಗ್ಗೆ ಪ್ರಧಾನಿ ಮೋದಿಯವರು ಗಮನಿಸಬೇಕು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಿಎಂ ಬಿಎಸ್​ವೈ ವಿರುದ್ಧ ಆರೋಪ ಮಾಡಿದ್ದಾರೆ.

Next Story

RELATED STORIES