Top

ಕೊರೊನಾ ಬಿಕ್ಕಟ್ಟಿನಲ್ಲೂ ರಕ್ತದಾನ: ಶಿವಮೊಗ್ಗ ಯುವಕರ ಶ್ಲಾಘನೀಯ ಕಾರ್ಯ

30ಕ್ಕೂ ಹೆಚ್ಚು ಜನರಿಂದ ರಕ್ತದಾನ

ಕೊರೊನಾ ಬಿಕ್ಕಟ್ಟಿನಲ್ಲೂ ರಕ್ತದಾನ: ಶಿವಮೊಗ್ಗ ಯುವಕರ ಶ್ಲಾಘನೀಯ ಕಾರ್ಯ
X

ಶಿವಮೊಗ್ಗ: ಕೊರೊನಾ ಎರಡನೇ ಅಲೆಗೆ ಕಡಿವಾಣ ಹಾಕುವ ಸಲುವಾಗಿ ರಾಜ್ಯದಾದ್ಯಂತ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಅಗತ್ಯ ಸೇವೆ ಹಾಗೂ ಉತ್ಪಾದಕ ಕ್ಷೇತ್ರ ಬಿಟ್ಟು ಉಳಿದೆಲ್ಲಾ ಚಟುವಟಿಕೆ ಗಳು ಸ್ಥಗಿತಗೊಂಡಿವೆ. ಜೊತೆಗೆ ಜನರ ಅನಗತ್ಯ ಓಡಾಟಕ್ಕೂ ಸಹ ಬ್ರೇಕ್ ಹಾಕಲಾಗಿದೆ. ಈ ಕರ್ಫ್ಯೂ ಪರಿಣಾಮ ಜನ ಸಾಮಾನ್ಯರ ಮೇಲೆ ಮಾತ್ರವಲ್ಲದೇ, ತುರ್ತು ಅಗತ್ಯವಾದ ಆರೋಗ್ಯ ಕ್ಷೇತ್ರದ ಮೇಲೂ ಆವರಿಸಿದೆ. ಜನರ ಓಡಾಟಕ್ಕೆ ಬ್ರೇಕ್ ಬಿದ್ದಿರುವ ಹಿನ್ನೆಲೆಯಲ್ಲಿ ರಕ್ತದಾನಿಗಳ ಕೊರತೆ ಎದುರಾಗಿದ್ದು, ನೇರವಾಗಿ ಸರ್ಕಾರಿ ಹಾಗೂ ಖಾಸಗಿ ಬ್ಲಡ್ ಬ್ಯಾಂಕ್ ಗಳ ಮೇಲೂ ಪರಿಣಾಮ ಬೀರಿದೆ.

ಒಂದು ಕಡೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದರೇ ಕ್ರಮದ ಭಯವಾದರೇ, ಇನ್ನೊಂದೆಡೆ ವೈರಸ್​ ಹರಡುವ ಭೀತಿಯಿಂದಾಗಿ ಯಾರೂ ಸಹ ರಕ್ತದಾನಕ್ಕೆ ಮುಂದೆ ಬರುತ್ತಿಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಎದುರಾಗಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು, ರೋಟರಿ ರಕ್ತನಿಧಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿ, ರಕ್ತದಾನ ಮಾಡಿದ್ದಾರೆ.

ಇನ್ನು ಜನತಾ ಕರ್ಫ್ಯೂ ಸಮಯದಲ್ಲಿ ತುರ್ತಾಗಿ ರಕ್ತ ಬೇಕಾದರೇ ಯಾರು ಸಹ ಬೇಗನೆ ಬರಲು ಸಾಧ್ಯವಾಗುವುದಿಲ್ಲ. ಜೊತೆಗೆ ಲಸಿಕೆ ಪಡೆದ ಕೆಲ ದಿನಗಳ ಕಾಲ ರಕ್ತದಾನ ಮಾಡಲು ಸಾಧ್ಯವಾಗದೇ ಇರಬಹುದು ಎಂಬ ಕಾರಣಕ್ಕೆ ಶಿವಮೊಗ್ಗದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ರಕ್ತದಾನ ಮಾಡಲು ನಿರ್ಧರಿಸಿ, ಸುಮಾರು 30ಕ್ಕೂ ಜನರಿಂದ ರಕ್ತದಾನ ಮಾಡಿಸಿದ್ದಾರೆ.

ಒಟ್ಟಾರೆ, ಕೊರೊನಾ ಸಂಕಷ್ಟದ ಸಮಯದಲ್ಲಿ ರಕ್ತದ ಅಭಾವ ಎದುರಾಗಿರುವುದನ್ನು ಮನಗಂಡು, ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನ ಮಾಡಿರುವ ಶಿವಮೊಗ್ಗದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯ ನಿಜಕ್ಕೂ ಶ್ಲಾಘನೀಯ.

Next Story

RELATED STORIES