Top

ಅಕ್ರಮ ಮರಳು ದಂಧೆ ಅವನ್ಯಾವನೋ ಎಂಪಿ ಇದ್ದಾನಲ್ಲಾ ಅವನ ಚೇಲಾಗಳು ನಡೆಸುತ್ತಿದ್ದಾರೆ - ಮಾಜಿ ಸಿಎಂ ಹೆಚ್ಡಿಕೆ ಗುಡುಗು

ನನ್ನ ಪಕ್ಷದ ಕಾರ್ಯಕರ್ತರು ಅಕ್ರಮ ಮರಳುಗಾರಿಕೆಯಲ್ಲಿ ಭಾಗಿ ಆಗಿಲ್ಲ

ಅಕ್ರಮ ಮರಳು ದಂಧೆ ಅವನ್ಯಾವನೋ ಎಂಪಿ ಇದ್ದಾನಲ್ಲಾ ಅವನ ಚೇಲಾಗಳು ನಡೆಸುತ್ತಿದ್ದಾರೆ - ಮಾಜಿ ಸಿಎಂ ಹೆಚ್ಡಿಕೆ ಗುಡುಗು
X

ರಾಮನಗರ: ಕಾಂಗ್ರೆಸ್​​ನ ಚೇಲಾಗಳು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಗುರುವಾರ ಹೇಳಿದ್ದಾರೆ.

ರಾಮನಗರದ ಕೂನಗಲ್ಲು ಗ್ರಾಮದಲ್ಲಿ ರಾಮನಗರ ಜಿಲ್ಲೆಯ ಹಲವೆಡೆ ಅಕ್ರಮ ಮರಳುಗಾರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅವನ್ಯಾವನೋ ಎಂಪಿ ಇದ್ದಾನಲ್ಲಾ, ಅವನ ಚೇಲಾಗಳು ನಡೆಸುತ್ತಿದ್ದಾರೆ. ನನ್ನ ಪಕ್ಷದ ಕಾರ್ಯಕರ್ತರು ಅಕ್ರಮ ಮರಳುಗಾರಿಕೆಯಲ್ಲಿ ಭಾಗಿ ಆಗಿಲ್ಲ. ಮರಳು ದಂಧೆ ಮಾಡೋದಾದ್ರೆ ನನ್ನ ಹತ್ತಿರ ಬರಬೇಡಿ ಎಂದಿದ್ದೇನೆ ಎಂದು ಹೆಚ್ಡಿಕೆ ಅವರು​ ಸಂಸದ ಡಿ.ಕೆ ಸುರೇಶ್​ ಅವರ ಹೆಸರು ಬಳಸದೇ ವಾಗ್ದಾಳಿ ನಡೆಸಿದ್ದಾರೆ.

ಇನ್ನು ದಂಧೆ ನಡೆಸುವವರು ಇವರೇ, ಜನರಿಂದ ಪ್ರತಿಭಟನೆ ಮಾಡಿಸುವವರು ಇವರೇ. ಕಳೆದ ಬಾರಿ ಕಾಂಗ್ರೆಸ್ ಆಡಳಿತದಲ್ಲಿ ದಂಧೆ ಪ್ರಾರಂಭವಾಯ್ತು. ನಾನು ಪ್ರಯತ್ನಪಟ್ಟರು ನಿಲ್ಲಿಸಲು ಆಗಲಿಲ್ಲ. ನನ್ನ ವಿರುದ್ಧ ಮಾತನಾಡುವವರು ನನ್ನ ಎದುರಿಗೆ ಬರಲಿ, ಚರ್ಚೆಗೆ ಸಿದ್ಧ. ಅವರ ತೆವಲಿಗೆ ನಮ್ಮ ವಿರುದ್ಧ ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಇನ್ನು ಆರ್.ಆರ್.ನಗರ, ಶಿರಾ ಉಪಚುನಾವಣೆ ಕುರಿತು ಮಾತನಾಡಿದ ಅವರು, ಶಿರಾದಲ್ಲಿ ನಾವು ಗೆಲ್ಲುತ್ತೇವೆ ಬನ್ನಿ ಏನು ಸಮಸ್ಯೆ ಇಲ್ಲ. ಬಿಜೆಪಿಯವರು ಹಣದ ಹೊಳೆ ಹರಿಸಿದ್ದಾರೆ, ಆದರಿಂದ ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ ಆದರೆ ಅದು ನಡೆಯೊಲ್ಲ. ಆರ್.ಆರ್ ನಗರದಲ್ಲಿ ಈಗಿನ ಚುನಾವಣಾ ವೆಚ್ಚದ ಕೊರತೆ ಇದೆ ಆದರಿಂದ ಸ್ವಲ್ಪ ಯಡವಟ್ಟಾಗಿದೆ ಆದರೆ ಎರಡೂ ಕಡೆ ಪಕ್ಷದ ಗೌರವ ಉಳಿಯಲಿದೆ ಎಂದಿದ್ದಾರೆ.

Next Story

RELATED STORIES