Top

ನನ್ನ ಮಗನನ್ನು ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ - ಡಿಕೆಶಿ ತಾಯಿ ಗೌರಮ್ಮ

ಸುಮ್ಮನೆ ನಮ್ಮ ಹೊಟ್ಟೆ ಹುರಿಸುತ್ತಾರೆ. ನಮ್ಮ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ.

ನನ್ನ ಮಗನನ್ನು ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ - ಡಿಕೆಶಿ ತಾಯಿ ಗೌರಮ್ಮ
X

ರಾಮನಗರ: ನನ್ನ ಮಗನನ್ನ ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ ಅದಕ್ಕಾಗಿಯೇ ಪದೆ-ಪದೇ ನಮ್ಮ ಮಗನನ್ನ ಟಾರ್ಗೆಟ್​​ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಳಗ್ಗೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಸ್ವ-ಗ್ರಾಮದಲ್ಲೂ ಸಿಬಿಐ ಅಧಿಕಾರಿಗಳ ದಾಳಿ ಹಿನ್ನೆಲೆ ಕೋಡಿಹಳ್ಳಿ ನಿವಾಸದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ದೊಡ್ಡ ಆಲಹಳ್ಳಿ ಗ್ರಾಮದ ಮನೆಯಲ್ಲಿ ಪರಿಶೀಲನೆ ನಡೆಸಿ ಅಲ್ಲಿರುವ ಇಟ್ಟಿಗೆಗಳನ್ನು ತಗೆದುಕೊಂಡು ಹೋಗಲಿ. ಅವರಿಗೂ ಮಾಡೋಕೆ ಕೆಲಸವಿಲ್ಲ ಸುಮ್ಮನೆ ತಿರುಗುತ್ತಾರೆ ಎಂದು ಹೇಳಿದರು.

ಇನ್ನು ಸುಮ್ಮನೆ ನಮ್ಮ ಹೊಟ್ಟೆ ಹುರಿಸುತ್ತಾರೆ. ನಮ್ಮ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ. ಬೇಕಾದರೆ, ನಾನು ಹೋಗಿ ಕುಳಿತುಕೊಳ್ಳುತ್ತೇನೆ ಸಮಯಕ್ಕೆ ಸರಿಯಾಗಿ ಊಟ ಕೊಟ್ಟರೆ ಸಾಕು ಎಂದು ಡಿಕೆಶಿಯವರ ತಾಯಿ ಗೌರಮ್ಮ ಅವರು ಸಿಬಿಐ ದಾಳಿಯನ್ನು ವಿರೋಧಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಡಿಕೆಶಿಯವರ ಸ್ವಗ್ರಾಮದ ನಿವಾಸದ ಮೇಲೆ 10 ಮಂದಿ ಸಿಬಿಐ ಅಧಿಕಾರಿಗಳ ತಂಡ ಸಿಬಿಐ ದಾಳಿ ನಡೆಸಿದೆ. ಅಧಿಕಾರಿಗಳು ಮನೆಯ ಸುತ್ತಲೂ ಸ್ಥಳೀಯ ಪೋಲೀಸರಿಂದ ಬಿಗಿ ಭದ್ರತೆ ತೆಗೆದುಕೊಂಡಿದ್ದಾರೆ. ಜೊತೆಗೆ ಕೋಡಿಹಳ್ಳಿ ಮನೆಯ ಮೇಲೂ ಸಿಬಿಐ ಅಧಿಕಾರಿಗಳ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

Next Story

RELATED STORIES