Top

ದರ್ಶನ್ ಅಭಿಯಾನಕ್ಕೆ ಭಾರೀ ಬೆಂಬಲ: ಮೃಗಾಲಯ ಪ್ರಾಧಿಕಾರಕ್ಕೆ ₹1 ಕೋಟಿ ನೆರವು

ದರ್ಶನ್​ಗೆ ಧನ್ಯವಾದ ತಿಳಿಸಿದ ಮೃಗಾಲಯ ಪ್ರಾಧಿಕಾರ

ದರ್ಶನ್ ಅಭಿಯಾನಕ್ಕೆ ಭಾರೀ ಬೆಂಬಲ: ಮೃಗಾಲಯ ಪ್ರಾಧಿಕಾರಕ್ಕೆ ₹1 ಕೋಟಿ ನೆರವು
X

ಮೈಸೂರು: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಮೃಗಾಲಯ ಪ್ರಾಧಿಕಾರಕ್ಕೆ, ನಟ ದರ್ಶನ್​ ಅವರ ಅಭಿಯಾನದಿಂದ ಭಾರೀ ನೆರವು ಹರಿದು ಬಂದಿದೆ.

ಕಳೆದ ವರ್ಷ ಕೊರೊನಾ ಲಾಕ್​ಡೌನ್​ನಿಂದ ಮೃಗಾಲಯ ನಿರ್ವಹಣೆ ಕಷ್ಟಕರವಾಗಿತ್ತು. ಈ ವೇಳೆ ಸಚಿವ ಸೋಮಶೇಖರ್ ನೆರವು ನೀಡಿದ್ದರು. ಈ ವರ್ಷವೂ ಲಾಕ್​ಡೌನ್​ ಆಗಿದ್ದು, ನೆರವಿಗಾಗಿ ಮೃಗಾಲಯ ಪ್ರಾಧಿಕಾರ ನಟ ದರ್ಶನ್​ ಅವರಿಗೆ ಮನವಿ ಮಾಡಿಕೊಂಡಿತ್ತು. ಅದರಂತೆ ದರ್ಶನ್​ ಕೂಡ ಪ್ರಾಣಿಗಳನ್ನು ದತ್ತು ಪಡೆಯುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಇದೀಗ ಪ್ರಾಣಿ ಪ್ರಿಯರು ಹಾಗೂ ದರ್ಶನ್​ ಅಭಿಮಾನಿಗಳು ಮೃಗಾಲಯಕ್ಕೆ ನೆರವಿನ ಹಸ್ತಚಾಚಿದ್ದು, ಕಳೆದ 6 ದಿನದಲ್ಲಿ ಮೃಗಾಲಯ ಪ್ರಾಧಿಕಾರಕ್ಕೆ 1 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ದರ್ಶನ್​ ಅವರಿಗೆ ಧನ್ಯವಾದ ತಿಳಿಸಿದೆ.

ಕಳೆದ ಒಂದು ವಾರದಲ್ಲಿ ವಿವಿಧ ಮೃಗಾಲಯಗಳಿಗೆ ಬಂದ ನೆರವು

ಮೈಸೂರು ಮೃಗಾಲಯ-₹51,76,700

ಬನ್ನೇರುಘಟ್ಟ -₹29,83,000

ಶಿವಮೊಗ್ಗ-₹7,24,800

ಗದಗ-₹2,66,400

ಹಂಪಿ-₹2,42,200

ಬೆಳಗಾವಿ-₹2,22,300

ದಾವಣಗೆರೆ- ₹₹1,94,900

ಚಿತ್ರದುರ್ಗ-₹1,49,300

ಕಲಬುರ್ಗಿ-₹83,300

ಒಟ್ಟು-₹1,00,47,900

Next Story

RELATED STORIES