Top

ನಿಮಗೆ ಗೊತ್ತಾ ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ

ಇಲ್ಲಿಯವರೆಗೆ ನಾನು ಗೋಮಾಂಸ ತಿಂದಿಲ್ಲ ಆದರೆ ತಿನ್ನಬೇಕು ಅನ್ಸಿದ್ರೆ ತಿಂತೀನಿ

ನಿಮಗೆ ಗೊತ್ತಾ ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ
X

ಮೈಸೂರು: ಇಲ್ಲಿಯವರೆಗೆ ನಾನು ಗೋಮಾಂಸ ತಿಂದಿಲ್ಲ ಆದರೆ ತಿನ್ನಬೇಕು ಅನ್ಸಿದ್ರೆ ತಿಂತೀನಿ ಅದನ್ನ ಕೇಳೋಕೆ ಇವರು ಯಾರು(?) ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಗೋಮಾಂಸ ಸೇವನೆ ಕುರಿತು ಬಿಜೆಪಿಗೆ ಕುಟುಕಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಆಹಾರ ನನ್ನ ಹಕ್ಕು ಅದನ್ನ ಪ್ರಶ್ನಿಸೋಕೆ ಇವರ್ಯಾರು(?) ಯಡಿಯೂರಪ್ಪಗೆ ಗೊತ್ತಿಲ್ಲ ಹೇಳ್ತೀನಿ ಕೇಳಿ. ಐ ಹ್ಯಾಮ್​ ಮೇಕಿಂಗ್​ ಇಟ್​ ವೆರಿ ಕ್ಲಿಯರ್ ​(I am making it very clear) ನಾನು ಈವರೆಗೆ ಗೋಮಾಂಸ ತಿಂದಿಲ್ಲ. ನಾನು ಹಂದಿ ಮಾಂಸ ತಿಂದಿಲ್ಲ ಆದರೆ, ತಿನ್ನಬೇಕು ಅನ್ನಿಸಿದ್ರೆ ತಿಂತೀನಿ ಎಂದಿದ್ದಾರೆ.

ಸದ್ಯ ನಾನು ತಿಂದಿರೋದು ಕೋಳಿ, ಕುರಿ, ಆಡಿನ ಮಾಂಸ ಮಾತ್ರ. ಆದರೆ, ನಮ್ಮ ಆಹಾರ ಪದ್ದತಿ ಪ್ರಶ್ನಿಸುವ ಹಕ್ಕು ಇಲ್ಯಾರಿಗೂ ಇಲ್ಲ. ಯಡಿಯೂರಪ್ಪ ಗೋಮಾಂಸ ತಿನ್ನೋದೆ ಸಾಧನೆ ಅಂತ ಹೇಳಿದ್ದಾನೆ. ಆದರೆ, ನಾನೇನು ಅವನ ಥರ ಸೋಪ್ಪು ತಿನ್ನಲೇ(?) ನಾನು ಸೋಪ್ಪು ಬೇಕು ಅಂದ್ರೆ ಸೋಪ್ಪುತಿಂತೀನಿ. ಮಾಂಸ ಬೇಕು ಅಂದ್ರೆ ಮಾಂಸ ತಿಂತೀನಿ. ನಾನೇನಾದೂ ನಿಂಗೆ ಹೇಳಿದ್ದೀನಾ ಮಾಂಸ ತಿನ್ನು ಅಂತ(?). ಮತ್ತೆ ಸುಮ್ಮನೆ ತಿನ್ನೋರಿಗೆ ಯಾಕೇ ಪ್ರಶ್ನೆ ಮಾಡ್ತೀಯಾ(?) ಎಂದು ಸಿಎಂ ಬಿಎಸ್​ವೈ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇನ್ನು ಜಗತ್ತಿನಲ್ಲಿ ಮಾಂಸಹಾರಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ ಗೊತ್ತಾ ನಿಮಗೆ. ಹಾಗಾದ್ರೆ ಅಮೆರಿಕದಲ್ಲಿ ಇರೋರು ಪ್ರಾಣಿಗಳಾ(?) ಇಂಗ್ಲೆಂಡ್, ಬ್ರಿಟನ್, ಸೇರಿದಂತೆ ಬೇರೆ ದೇಶದಲ್ಲಿರೋ ದನ ತಿಂತಾರೆ. ಹಾಗಾದ್ರೆ ಅವರೇಲ್ಲಾ ಪ್ರಾಣಿಗಳಾ(?) ನಿಮಗೆ ಸೋಪ್ಪು ಇಷ್ಟ ಇದ್ರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆ ಅದನ್ನ ತಿನ್ನೋಕೆ ಬಿಡಿ ಎಂದು ಸಿಎಂ ವಿರುದ್ದ ಸಿದ್ದರಾಮಯ್ಯ ಅವರು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವೇ ಇದೆ. ಅದು ನನಗೆ ನೆನಪಾಗುತ್ತಿಲ್ಲ ಆಮೇಲೆ ನೆನಪು ಮಾಡಿಕೊಂಡು ಹೇಳ್ತೀನಿ. ದನದ ಮಾಂಸದ ಬಗ್ಗೆ ಶ್ಲೋಕ ಬರೆಯಲಾಗಿದೆ. ಶ್ಲೋಕ ಬರೆದಿರೋದು ಯಾರಪ್ಪ(?) ಸಂಸ್ಕೃತ ಗೊತ್ತಿರೋರೆ ತಾನೇ ಬರೆಯೋದು. ಹಾಗಾದ್ರೆ ಶ್ಲೋಕದಲ್ಲಿ ತಪ್ಪು ಇದ್ಯಾ(?) ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಆ ಶ್ಲೋಕದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಆ ಶ್ಲೋಕ ನೆನಪಾಗುತ್ತಿಲ್ಲ. ಮತ್ತೆ ಮೈಸೂರಿಗೆ ಬಂದಾಗ ಆ ಶ್ಲೋಕ ಹೇಳ್ತೀನಿ. ಈಗ ಹೇಳಿದ್ರೆ ಅದನ್ನ ವಿವಾದ ಮಾಡಿ ಬಿಡುತ್ತಾರೆ. ಅದಕ್ಕೆ ಶ್ಲೋಕವನ್ನ ಸರಿಯಾಗಿಯೇ ಹೇಳ್ತೀನಿ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

Next Story

RELATED STORIES