Top

ಸಾ.ರಾ ಮಹೇಶ್ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ

ಸಿಂಧೂರಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋಯೊಂದು ವೈರಲ್ ಆಗಿದ್ದು ಇದರಲ್ಲಿ ಶಾಸಕ ಸಾರಾ ಮಹೇಶ್ ಹಾಗೂ ಮುಡಾ ಅಧ್ಯಕ್ಷ ರಾಜೀವ್ ಹೆಸರು ಪ್ರಸ್ತಾಪ.

ಸಾ.ರಾ ಮಹೇಶ್ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ
X

ಮೈಸೂರು: ಮೈಸೂರು ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಭೂ ಮಾಫಿಯಾವೇ ಕಾರಣ ಎನ್ನುವ ಆರೋಪಕ್ಕೆ ಆಡಿಯೋವೊಂದು ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಆಡಿಯೋ ವೈರಲ್ ಆದ ಬೆನ್ನಲ್ಲೇ ಇದರ ವಿರುದ್ಧ ಶಾಸಕ ಸಾರಾ ಮಹೇಶ್ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಈ ಬಗ್ಗೆ ತನಿಖೆ ಮಾಡುವಂತೆ ಆರ್ಸಿಗೆ ಮನವಿ ಮಾಡಿದ್ರೆ ಇತ್ತ ವಿಶ್ವನಾಥ್ ಕೂಡ ಭೂ ಅಕ್ರಮದ ಆರೋಪದ ವಿರುದ್ಧ ತನಿಖೆ ಮಾಡುವಂತೆ ಡಿಸಿಗೆ ಮನವಿ ಮಾಡಿದ್ದಾರೆ.

ಆ ಒಂದು ಆಡಿಯೋ ಇದೀಗಾ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಇಬ್ಬರು ಘಟಾನುಘಟಿ ಮುಖಂಡರಿಗೆ ಶಾಕ್ ನೀಡಿದೆ. ರೋಹಿಣಿ ಸಿಂಧೂರಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋಯೊಂದು ವೈರಲ್ ಆಗಿದ್ದು ಇದರಲ್ಲಿ ಶಾಸಕ ಸಾರಾ ಮಹೇಶ್ ಹಾಗೂ ಮುಡಾ ಅಧ್ಯಕ್ಷ ರಾಜೀವ್ ಹೆಸರು ಪ್ರಸ್ತಾಪವಾಗಿದೆ. ಮೈಸೂರಿನ ವಿವಿಧ ಕಡೆಯಲ್ಲಿ ಸಾರಾ ಮಹೇಶ್ ಹಾಗೂ ರಾಜೀವ್ ಅವರದ್ದು ಎನ್ನಲಾದ ಜಾಗಗಳಿಗೆ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ನೋಟಿಸ್ ಜಾರಿ ಮಾಡಿದ್ದು, ಶೀಘ್ರದಲ್ಲೇ ಇದನ್ನ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಇಂದಿನ ಡಿಸಿ ಹಾಗೂ ಮುಡಾ ಆಯುಕ್ತರಿಗೆ ಸೂಚಿಸಿದ್ದಾರೆ.

ಇನ್ನು ವೈರಲ್ ಆದ ಆಡಿಯೋದಲ್ಲಿ ಸಾರಾ ಹೆಸರು ಹಾಗೂ ತಮ್ಮ ಜಾಗದ ಹೆಸರು ಪ್ರಸ್ತಾಪ ಆಗಿದ್ದಕ್ಕೆ ಶಾಸಕ ಸಾರಾ ಮಹೇಶ್ ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ರು. ನನ್ನ ಮೇಲಿನ ಆರೋಪ ಸಾಬೀತಾದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನನ್ನ ಬಳಿ ಇರುವ ಎಲ್ಲ ದಾಖಲೆ ಸರಿಯಾಗಿದ್ದು, ಆಗೊಮ್ಮೆ ನಾನು ಇದರಲ್ಲಿ ತಪಿತಸ್ಥ ಅಲ್ಲವಾದ್ರೆ ರೋಹಿಣಿ ಸಿಂಧೂರಿ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಆಂಧ್ರದ ಮನೆಯಲ್ಲಿ ಅಡುಗೆ ಮಾಡಿಕೊಂಡು ಇರ್ತಾರಾ? ಎಂದು ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಾರಾ ಮಹೇಶ್ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಪ್ರಾದೇಶಿಕ ಆಯುಕ್ತ ಪ್ರಕಾಶ್ ಅವರಯ ಭೇಟಿ ಕೊಟ್ಟು ನಿರ್ಗಮಿತ ಡಿಸಿ ಆದೇಶ ಹಾಗೂ ಕಂದಾಯ ಇಲಾಖೆ ಕಾರ್ಯದರ್ಶಿಗಳ ಸೂಚನೆ ಮೇರೆಗೆ ತನಿಖೆ ನಡೆಯುತ್ತಿದ್ದು ಇದಕ್ಕಾಗಿ ತಂಡವು ರಚಿಸಲಾಗಿದೆ ಎಂದು ಪ್ರಕಾಶ್ ಅವರು ತಿಳಿಸಿದ್ದಾರೆ.

ಇದೆಲ್ಲದರ ಬೆಳವಣಿಗೆ ಮುನ್ನವೇ ಎಂಎಲ್ಸಿ ವಿಶ್ವನಾಥ್ ಡಿಸಿ ಬಗಾದಿ ಗೌತಮ್ ಅವರನ್ನ ಭೇಟಿಯಾಗಿ ನಿರ್ಗಮಿತ ಡಿಸಿಯ ವರದಿಯನ್ನ ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಸಾರಾ ಮಹೇಶ್ ಪ್ರತಿಭಟನೆ ಸ್ವಾಗತಿಸುತ್ತೇನೆ ಆದರೆ ಈ ತನಿಖೆ ಆದಷ್ಟು ಬೇಗ ಆಗಲಿ ಎಂದು ಮನವಿ ಮಾಡಿದ್ದಾರೆ.

ಸದ್ಯ ಮೈಸೂರಿನಲ್ಲಿಗಾ ಭೂ ಮಾಫಿಯಾದ ಆರೋಪದ ಮಾತುಗಳದ್ದೆ ಸದ್ದು ಜೋರಾಗಿದ್ದು ಪ್ರಕರಣ ಸರ್ಕಾರದ ಅಂಗಳಕ್ಕೆ ತಲುಪಿದೆ. ಆದ್ರೆ ಆರೋಪ ಪ್ರತ್ಯಾರೋಪದ ಮಧ್ಯೆ ಈ ಪ್ರಕರಣ ಎಲ್ಲಿ ಹೋಗಿ ನಿಲ್ಲತ್ತೋ ಕಾದು ನೋಡಬೇಕಿದೆ.

Next Story

RELATED STORIES