ಸಿಎಂ ಬದಲಾವಣೆ ವಿಚಾರ ಉಲ್ಟಾ ಹೊಡೆದ ಮಾಜಿ ಸಿಎಂ ಸಿದ್ದರಾಮಯ್ಯ
ನಮಗಿದ್ದ ಮಾಹಿತಿ ಪ್ರಕಾರ ಹೈಕಮಾಂಡ್ ಸಿಎಂ ರಾಜೀನಾಮೆ ಕೇಳಿದ್ದರೂ, ಬಹುಶಃ ಸಂಪುಟ ವಿಸ್ತರಣೆ ಮಾಡಿ ಕೊಡ್ತಿನಿ ಅಂತ ಹೇಳಿರಬಹುದು

ಮೈಸೂರು: ಮಂತ್ರಿ ಮಂಡಲ ವಿಸ್ತರಣೆಯಿಂದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇನ್ನು ಸ್ವಲ್ಪ ದಿನ ಮುಂದುವರಿಯಬಹುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉಟ್ಟಾ ಹೊಡೆದಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗ ಸಂಪುಟ ವಿಸ್ತರಣೆ ಆಗಿರೋದನ್ನ ನೋಡಿದ್ರೆ, ಇನ್ನು ಸ್ವಲ್ಪ ದಿನ ಯಡಿಯೂರಪ್ಪರೆ ಸಿಎಂ ಆಗಿ ಇರಬಹುದು. ಬಹುಶಃ ಸಂಪುಟ ವಿಸ್ತರಣೆ ಆದ ನಂತರ ರಾಜೀನಾಮೆ ಕೊಡ್ತೀನಿ ಅಂತ ಹೇಳಿರಬಹುದೇನೋ ಎಂದಿದ್ದಾರೆ.
ಇನ್ನು ನಮಗಿದ್ದ ಮಾಹಿತಿ ಪ್ರಕಾರ ಹೈಕಮಾಂಡ್ ಸಿಎಂ ರಾಜೀನಾಮೆ ಕೇಳಿದ್ದರೂ, ಬಹುಶಃ ಸಂಪುಟ ವಿಸ್ತರಣೆ ಮಾಡಿ ಕೊಡ್ತಿನಿ ಅಂತ ಹೇಳಿರಬಹುದು. ಹೀಗಾಗಿ ಇನ್ನು ಸ್ವಲ್ಪ ದಿನ ಅವರೇ ಸಿಎಂ ಆಗಿ ಉಳಿಯುವ ಸಾಧ್ಯತೆ ಇದೆ ಎಂದಿದ್ದಾರೆ.
ಸದ್ಯ ಯಡಿಯೂರಪ್ಪ ಬಜೆಟ್ ಮಂಡಿಸಲೇಬೇಕು. ಇಲ್ಲವಾದ್ರೆ ಮಾರ್ಚ್ ನಂತರ ಒಂದು ರೂಪಾಯಿಯೂ ಖರ್ಚು ಮಾಡೋಕೆ ಆಗೋಲ್ಲ ಇವರಿಗೆ. ನನ್ನ ಬಜೆಟ್ ಸ್ಟೈಲ್ ಬೇರೆ ಇತ್ತು. ಇವರ ಬಜೆಟ್ ಸ್ಟೈಲ್ ಬೇರೆ ಇದೆ. ಈಗ ಮೀಟಿಂಗ್ ಮಾಡುತ್ತಿದ್ದೀವಿ ಅಂತ ಹೇಳಿದ್ದಾರೆ. ನೋಡೋಣ ಏನ್ ಮಾಡ್ತಾರೆ ಅಂತ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.