Top

ರೋಹಿಣಿ ಸಿಂಧೂರಿ ವರ್ಗಾವಣೆಗೆ ಕಾರಣ ಕೊಟ್ಟ ಸಚಿವ ಎಸ್​.ಟಿ ಸೋಮಶೇಖರ್

ಹಿಂದಿನ ಜಿಲ್ಲಾಧಿಕಾರಿ ಮಾಡಿರೋ ಭೂ ಅಕ್ರಮ ಕುರಿತ ಆದೇಶಗಳ ಮೇಲೆ ಕ್ರಮ ಜರುಗಿಸುವ ಕೆಲಸವನ್ನು ನೂತನ ಜಿಲ್ಲಾಧಿಕಾರಿ ಮಾಡುತ್ತಾರೆ

ರೋಹಿಣಿ ಸಿಂಧೂರಿ ವರ್ಗಾವಣೆಗೆ ಕಾರಣ ಕೊಟ್ಟ ಸಚಿವ ಎಸ್​.ಟಿ ಸೋಮಶೇಖರ್
X

ಮೈಸೂರು: ಮೈಸೂರಿನಲ್ಲಿ ಲಾಕ್​ಡೌನ್ ಮುಂದುವರಿಸಬೇಕೋ ಅಥವಾ ಬೇಡವಾ(?) ಸಂಜೆಯೊಳಗೆ ತೀರ್ಮಾನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್ ಅವರು ಗುರುವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಶಾಸಕರ ಸಭೆ ನಡೆಸಿ ಸಂಜೆ ವೇಳೆಗೆ ಸಿಎಂಗೆ ಮಾಹಿತಿ ಕೊಡುತ್ತೇವೆ. ಈಗ ಸಿಎಂಗೆ ನಾವು ಈ ವಿಚಾರದಲ್ಲಿ ಏನನ್ನೂ ಹೇಳಿಲ್ಲ. ಸಂಜೆ ಶಾಸಕರ ಅಭಿಪ್ರಾಯದಂತೆ ಅಭಿಪ್ರಾಯ ತಿಳಿಸುತ್ತೇವೆ. ಈ ಬಗ್ಗೆ ಸಿಎಂ ಅವರಿಗೆ ಹೇಳಿದ್ದೇವೆ ಎಂದಿದ್ದಾರೆ.

ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೊಟ್ಟ ವರದಿ ಕಾರಣ. ಮೈಸೂರಿನಲ್ಲಿ ನಡೆದ ವಿದ್ಯಮಾನಗಳ ಪರಿಶೀಲಿಸಿ. ಮುಖ್ಯ ಕಾರ್ಯದರ್ಶಿಗಳು ಸರಕಾರಕ್ಕೆ ವರದಿ ಕೊಟ್ಟಿದ್ದರು. ವರದಿ ಆಧರಿಸಿ ಸರಕಾರ ವರ್ಗಾವಣೆ ಆದೇಶ ಮಾಡಿದೆ ಇದರ ಹೊರತು ವರ್ಗಾವಣೆಗೆ ಬೇರೆ ಏನೂ ಕಾರಣವಿಲ್ಲ. ಯಾರದೂ ಇದರಲ್ಲಿ ಒತ್ತಡವಿಲ್ಲ. ಹಿಂದಿನ ಜಿಲ್ಲಾಧಿಕಾರಿ ಮಾಡಿರೋ ಭೂ ಅಕ್ರಮ ಕುರಿತ ಆದೇಶಗಳ ಮೇಲೆ ಕ್ರಮ ಜರುಗಿಸುವ ಕೆಲಸವನ್ನು ನೂತನ ಜಿಲ್ಲಾಧಿಕಾರಿ ಮಾಡುತ್ತಾರೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಅವರು ಮಾತನಾಡಿದ್ದಾರೆ.


Next Story

RELATED STORIES