Top

ಪಾರ್ಲಿಮೆಂಟ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ - ವಾಟಾಳ್​ ನಾಗರಾಜ್​

ನಿಮಗೆ ಜವಾಬ್ದಾರಿ, ಗೌರವ ಇದ್ದರೆ, ಪ್ರಧಾನಿ ವಿರುದ್ಧ ನಿಂತು ಒತ್ತಾಯ ಮಾಡಬೇಕು.

ಪಾರ್ಲಿಮೆಂಟ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ - ವಾಟಾಳ್​ ನಾಗರಾಜ್​
X

ಮೈಸೂರು: ಬೆಲೆ ಏರಿಕೆ ಮಾಡಿ ಪ್ಯಾಕೇಜ್ ಲಕೇಜ್ ಅಂತ ಘೋಷಣೆ ಮಾಡೋದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್ ಅವರು ಗುರುವಾರ ಹೇಳಿದ್ದಾರೆ.

ಪೆಟ್ರೋಲ್​ ಬೆಲೆ ಏರಿಕೆ ವಿರೋಧಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬೆಲೆ ಏರಿಕೆಯಿಂದ ದೇಶದ ಜನರ ಬೆನ್ನು ಮೂಳೆ ಮುರಿದಿದೆ. ಜನ ಕೇಂದ್ರದ ನೀತಿ ವಿರೋಧಿಸಿ ಜನ ಹೋರಾಟ ಮಾಡಬೇಕು. ಜೈಲಿಗೆ ಹೋಗಬೇಕು. ಜನಸಾಮಾನ್ಯರಿಗೆ ಬಾರಿ ತೊಂದರೆ ಆಗುತ್ತಿದೆ, ಇದು ಒಳ್ಳೆಯದಲ್ಲ ಎಂದಿದ್ದಾರೆ.

ಇನ್ನು ರಾಜ್ಯದ ಎಂಪಿ, ಎಂಎಲ್ಎಗಳು ಏನು ಮಾಡುತ್ತಿದ್ದಾರೆ(?) ನಿಮಗೆ ಜವಾಬ್ದಾರಿ, ಗೌರವ ಇದ್ದರೆ, ಪ್ರಧಾನಿ ವಿರುದ್ಧ ನಿಂತು ಒತ್ತಾಯ ಮಾಡಬೇಕು. ಪಾರ್ಲಿಮೆಂಟ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Next Story

RELATED STORIES