Top

ಮೈಸೂರು ಪಾಲಿಕೆ ಸಿಬ್ಬಂದಿಗೆ ಮಹಿಳೆಯರಿಂದ ಧರ್ಮದೇಟು

ಆಶ್ರಯ ಮನೆಗಾಗಿ ವಾಸ ಧೃಡಿಕರಣ ಪತ್ರಕ್ಕೆ‌ ಮನವಿ ಮಾಡಿದ್ದ ಮಹಿಳೆ ಜೊತೆ ಅಶ್ಲೀಲವಾಗಿ ಮಾತನಾಡಿದ ಆರೋಪ

ಮೈಸೂರು ಪಾಲಿಕೆ ಸಿಬ್ಬಂದಿಗೆ ಮಹಿಳೆಯರಿಂದ ಧರ್ಮದೇಟು
X

ಮೈಸೂರು: ಮಹಿಳೆ ಜೊತೆ ಅಶ್ಲೀಲ ಮಾತನಾಡಿದ ಆರೋಪದ ಮೇಲೆ ಮೈಸೂರು ಪಾಲಿಕೆ ಸಿಬ್ಬಂದಿಗೆ ಮಹಿಳೆಯರು ಧರ್ಮದೇಟು ಕೊಟ್ಟಿದ್ದಾರೆ.

ಆಶ್ರಯ ಮನೆಗಾಗಿ ವಾಸ ಧೃಡಿಕರಣ ಪತ್ರಕ್ಕೆ‌ ಮನವಿ ಮಾಡಿದ್ದ ಮಹಿಳೆ ಜೊತೆ ಮೈಸೂರು ಪಾಲಿಕೆ ಶಾರದಾ ದೇವಿ ನಗರದ ವಲಯ ಕಚೇರಿ ಸಿಬ್ಬಂದಿ ವಿಷಕಂಠೇಗೌಡ ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಸಿಬ್ಬಂದಿಯ ವರ್ತನೆ ವಿರುದ್ಧ ಕೋಪಗೊಂಡ ಮಹಿಳೆಯರು ಸಿಬ್ಬಂದಿ ಇರುವ ಕಚೇರಿಗೆ ಹೋಗಿ ಥಳಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ. ಇನ್ನು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES