Top

ನಾನು ಚಾಮುಂಡಿಯಲ್ಲಿ ಮೂರು ವಿಚಾರ ಬೇಡಿಕೊಂಡೆ - ಡಾ.ಸಿ.ಎನ್​ ಮಂಜುನಾಥ್

ನಾನು ಸರ್ಕಾರಕ್ಕೆ ಹಾಗೂ ಸಿಎಂಗೆ ಧನ್ಯವಾದ ಅರ್ಪಿಸುತ್ತೇನೆ

ನಾನು ಚಾಮುಂಡಿಯಲ್ಲಿ ಮೂರು ವಿಚಾರ ಬೇಡಿಕೊಂಡೆ - ಡಾ.ಸಿ.ಎನ್​ ಮಂಜುನಾಥ್
X

ಬೆಂಗಳೂರು: ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು, ಇದು ವೈದ್ಯರಿಗೆ ಕೊಟ್ಟ ದೊಡ್ಡ ಗೌರವವಾಗಿದ್ದು, ದಸರಾ ಇತಿಹಾಸದಲ್ಲೆ ಮೊದಲು ಇದಕ್ಕೆ ನಾನು ಸರ್ಕಾರಕ್ಕೆ ಹಾಗೂ ಸಿಎಂಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಹೇಳಿದರು.

ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆ ಭಾಷಣದಲ್ಲಿ ಮಾತನಾಡಿದ ಅವರು, ಇದು ನನಗೆ ಸಿಕ್ಕ ದೊಡ್ಡ ಗೌರವ. ದಸರಾ ಆರಂಭಿಸಿದ ಯದುವಂಶ ಜನರ ಅರಸರಾಗಿದ್ಧರು ಅಂತಹ ದಸರಾದಲ್ಲಿ ಭಾಗಿಯಾಗಿದ್ದು, ನನ್ನ ಸೌಭಾಗ್ಯ ಎಂದಿದ್ದಾರೆ.

ಸದ್ಯ ನನ್ನ ಪತ್ನಿ ಹಾಗೂ ಮಕ್ಕಳು ಹೇಳಿದ್ದಾರೆ. ನಮಗಾಗಿ ಏನೂ ಕೇಳಬೇಡಿ ಅಂತ. ಹೀಗಾಗಿ ನಾನು ಚಾಮುಂಡಿಯಲ್ಲಿ ಮೂರು ವಿಚಾರ ಬೇಡಿಕೊಂಡೆ. ಕೊರೊನಾಗೆ ಶೀಘ್ರದಲ್ಲೆ ಲಸಿಕೆ ಸಿಗಬೇಕು. ಜಗತ್ತಿನಲ್ಲೆ ಕೊರೊನಾ ನಿವಾರಣೆ ಆಗಬೇಕು. ಜಲಪ್ರವಾಹ ನಿಲ್ಲಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದು ಅವರು ತಿಳಿಸಿದರು.

ಕೊರೊನಾ ವಾರಿಯರ್ಸ್​​ಗಳನ್ನು ಹುತಾತ್ಮರನ್ನಾಗಿ ನೋಡಬೇಕು. ದೇಶದಲ್ಲಿ ಕೊರೊನಾಗೆ 500 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. 700 ಮಂದಿ ನರ್ಸ್ ಹಾಗೂ ಟೆಕ್ನಿಷಿಯನ್ ಸಾವನ್ನಪ್ಪಿದ್ದಾರೆ. ಇವರೆಲ್ಲರಿಗೆ ಸರ್ಕಾರ ನೀಡಬೇಕಾದ ಸೌಲಭ್ಯ ನೀಡಬೇಕು. ಕೊರೊನಾ ವಾರಿಯರ್ಸ್​ಗೆ ಸರ್ಕಾರದಿಂದ ಪ್ರಶಂಸೆ ಪತ್ರ ನೀಡಬೇಕು. ಕೊರೊನಾ ಆತಂಕದ ರೋಗ ಅಷ್ಟೇ. ಅದು ಕಳಂಕದ ರೋಗ ಅಲ್ಲ. ಕೊರೊನಾ ಬಗ್ಗೆ ಭಯ ಬೇಡ. ಈ ಕಾಯಿಲೆಯಿಂದ ವೈದ್ಯರೇ ರೋಗಿಗಳಾಗುತ್ತಿದ್ದಾರೆ ಇದನ್ನ ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಇನ್ನು ವೈದ್ಯರ ಮೇಲೆ ಹಲ್ಲೆ ನಿಲ್ಲಬೇಕು. ವೈದ್ಯರ ಮೇಲೆ ಹಲ್ಲೆ ಮಾಡಿದರೆ ವೈದ್ಯ ವೃತ್ತಿ ಬೇರೆ ದಾರಿ ಹಿಡಿಯುತ್ತದೆ. ಜನರು ಅರ್ಥ ಮಾಡಿಕೊಳ್ಳಬೇಕು ವೈದ್ಯರು ಮನುಷ್ಯರೇ. ಗ್ರಾಮೀಣ ಆಸ್ಪತ್ರೆಗಳನ್ನು ಜಿಲ್ಲಾ ಕೇಂದ್ರಗಳಿಂದ ನಿರ್ವಹಣೆ ಮಾಡಬೇಕು. ವೈದ್ಯರ ಬಗ್ಗೆ ಗೌರವ ನೀಡಿ ದಸರಾ ಉದ್ಘಾಟನೆ ಮಾಡಿಸಿದ್ದಕ್ಕೆ ಧನ್ಯವಾದ ಎಂದು ದಸರಾ 2020ರ ಉದ್ಘಾಟನೆ ಅಧ್ಯಕ್ಷ ಡಾ.ಸಿ.ಎನ್​ ಮಂಜುನಾಥ್​ ಹೇಳಿದ್ದಾರೆ.

Next Story

RELATED STORIES