Top

ಬೆಳ್ಳಂಬೆಳಗ್ಗೆ ರೈತನ ಮೇಲೆ ಚಿರತೆ ದಾಳಿ

ಚಿರತೆ ದಾಳಿಯಿಂದ ಗಂಭೀರ ಗಾಯಗೊಂಡ ಹೆಚ್​.ಡಿ ಕೋಟೆ ರೈತ

ಬೆಳ್ಳಂಬೆಳಗ್ಗೆ ರೈತನ ಮೇಲೆ ಚಿರತೆ ದಾಳಿ
X

ಮೈಸೂರು: ಚಿರತೆ ದಾಳಿಯಿಂದ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕೊಡಿ ಚಾಮನಹಳ್ಳಿಯಲ್ಲಿ ನಡೆದಿದೆ.

ವೆಂಕಟೇಗೌಡ ಎನ್ನುವವರು ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದರು. ಇಂದು ಬೆಳಗ್ಗೆ ಕೋಳಿಗಳ ಕೂಗಾಟ ಕೇಳಿ ಹೊರ ಬಂದ ವೆಂಕಟೇಗೌಡ ಅವರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ.

ಘಟನೆಯಲ್ಲಿ ವೆಂಕಟೇಗೌಡ ಅವರ ದೇಹದ ಹಲವು ಕಡೆಗಳಲ್ಲಿ ಗಂಭೀರ ಗಾಯಗಳಾಗಿದ್ದು, ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Next Story

RELATED STORIES