Top

2023ಕ್ಕೆ ಅಪ್ಪ ಮಕ್ಕಳ ಪಕ್ಷ ಏನು ಮಾಡುತ್ತೆ ಅನ್ನೋದನ್ನು ಕಾದುನೋಡಿ - ಮಾಜಿ ಸಚಿವ ಹೆಚ್​.ಡಿ ರೇವಣ್ಣ

ಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಅಂದ್ರೆ ಅಪ್ಪ ಮಕ್ಕಳಿಂದ ಕಣ್ರೀ(!)

2023ಕ್ಕೆ ಅಪ್ಪ ಮಕ್ಕಳ ಪಕ್ಷ ಏನು ಮಾಡುತ್ತೆ ಅನ್ನೋದನ್ನು ಕಾದುನೋಡಿ - ಮಾಜಿ ಸಚಿವ ಹೆಚ್​.ಡಿ ರೇವಣ್ಣ
X

ಹಾಸನ: ದೇವೇಗೌಡರ ಬಗ್ಗೆ ಮಾತನಾಡಲಿಕ್ಕೆ ಯಾವ ನೈತಿಕತೆ ಇದೆ ನಳೀನ್ ಕುಮಾರ್ ಕಟೀಲ್​ಗೆ, ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಅಂದ್ರೆ ಅಪ್ಪ ಮಕ್ಕಳಿಂದ ಕಣ್ರೀ(!) ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರು ಹೇಳಿದರು.

ಅಪ್ಪ ಮಕ್ಕಳ ಅಧಿಕಾರಕ್ಕೆ ಬ್ರೇಕ್ ಹಾಕಿ ಹಾಗೂ ರಾಜ್ಯಕ್ಕೆ ಬರ ಬಂದ್ರು ಗೌಡರ ಕಣ್ಣೀರು ಮಾತ್ರ ಬತ್ತೋದಿಲ್ಲ ಎಂಬ ನಳೀನ್​ ಕುಮಾರ್ ಕಟೀಲ್​ ಹೇಳಿಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅಪ್ಪ-ಮಕ್ಕಳ ಪಕ್ಷವನ್ನು ತಗಿಯಲಿಕ್ಕೆ ಹೊರಟಿದ್ದಾರೆ ಅವರಿಗೆ ಓಳ್ಲೆಯಾದಾಗಲಿ. ನಮ್ಮನ್ನು ಬೇಕಾದ್ರೆ ಬೈಯ್ಯಲಿ, ದೇವೇಗೌಡರನ್ನು ಬೈಯ್ಯುವುದಕ್ಕೆ ಯಾವ ನೈತಿಕ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ತೂಮಕೂರಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಏನು ಮಾಡಿದರು ಅನ್ನೂದು ಗೊತ್ತಿದೆ. 2023ಕ್ಕೆ ಅಪ್ಪ ಮಕ್ಕಳ ಪಕ್ಷವನ್ನು ಮುಗಿಸಿ ನೋಡಲಿ. 60 ವರ್ಷದಿಂದ ಈ ಜಿಲ್ಲೆಗೆ ಕೊಡುಗೆ ಕೊಟ್ಟಿದ್ದಾರೆ ದೇವೇಗೌಡರು, ರೈತರ ಸಾಲಮನ್ನ ಮಾಡಲಿಕ್ಕೆ ಅಪ್ಪ ಮಕ್ಕಳ ಪಕ್ಷನೇ ಬರ ಬೇಕಾಯಿತು. ಬಿಜೆಪಿ ಅಧಿಕಾರಕ್ಕೆ ಬರಲು ಅಪ್ಪ ಮಗನೆ ಸಸಿ ನೆಟ್ಟಿದ್ದು, ಹಾಗಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗಾಗಲೇ ಕಾಂಗ್ರೆಸ್​ ಮುಗಿಸಿದ್ದಾರೆ ಆದರೆ ಅಪ್ಪ ಮಕ್ಕಳ ಪಕ್ಷ ಏನು ಮಾಡುತ್ತೆ ಅನ್ನೂದನ್ನು 2023ಕ್ಕೆ ಕಾದುನೋಡಿ ಎಂದು ಸವಾಲ್​ ಹಾಕಿದ್ದಾರೆ.

ಪ್ರತಾಪ್ ಸಿಂಹ ಹಾಸನ ಜಿಲ್ಲೆ ಚಿಂತೆ ಬೇಡ ಮೈಸೂರು ನೋಡಿಕೊಳ್ಳಲಿ. ಪ್ರತಾಪ್ ಸಿಂಹನಿಗೆ ಕಡತ ತಂದು ಓದಲು ಹೇಳಿ, ಹಾಸನ ಮೈಸೂರು ರಸ್ತೆ ನಾವು ಮಾಡಿದ್ದು ಕಣ್ರೀ(!) ರಾಜ್ಯ ಸರ್ಕಾರದ್ದು 50 ಪರ್ಸೆಂಟ್ ಹಣ ಕೇಂದ್ರದ್ದು 50 ಪರ್ಸೆಂಟ್ ಕೊಟ್ಟಿರೋದು ಎಂದರು.

ಮಾಜಿ ಸಚಿವ ಹೆಚ್ಡಿ ರೇವಣ್ಣ ಹಾಸನಕ್ಕೆ ಬಂದ್ರೆ ಲೆಕ್ಕ ಕೊಡುತ್ತೇನೆ ಎಂದು ಸವಾಲು ಹಾಕಿದ ಪ್ರೀತಂ ಗೌಡ ಹೇಳಿಕ ಹಿನ್ನೆಲೆ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡಗೆ 2023ಕ್ಕೆ ಕೊಡುತ್ತೇವೆ. ನಮಗೆ ಲೆಕ್ಕ ಹಾಕಲಿಕ್ಕೆ ಬರೋಲ್ಲ ಅವರ ಬಗ್ಗೆ ರಿಯಾಕ್ಟ್ ಮಾಡಲ್ಲ, ಅವರು ದೊಡ್ಡವರು ನಾನು ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ, ನಾವು ಹೊಟ್ಟೆಗೆ ಹಿಟ್ಟಿಲ್ಲದವರ ಲೆಕ್ಕ ಹಾಕುತ್ತೇವೆ. ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ರಾಷ್ಟ್ರೀಯ ಪಕ್ಷ ಇದೆ. ತಾಕತ್​ ಇದ್ದರೆ ಸಾಲಮನ್ನಾ ಮಾಡಲಿ ನೋಡೋಣ ಎಂದು ಸವಾಲು ಎಸೆದಿದ್ದಾರೆ.

Next Story

RELATED STORIES