Top

ಈ ಕೂಸು ಆಕಸ್ಮಿಕವಾಗಿ ಬಂದಿರೋದು ಇವನಿಗೆ ಉತ್ತರ ಕೊಡಬೇಕಾ - ಹೆಚ್​.ಡಿ ರೇವಣ್ಣ ವಾಗ್ದಾಳಿ

ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ದ ಮಾಜಿ ಸಚಿವ ಹೆಚ್​ ಡಿ ರೇವಣ್ಣ ಏಕವಚನದಲ್ಲಿ ವಾಗ್ದಾಳಿ

ಈ ಕೂಸು ಆಕಸ್ಮಿಕವಾಗಿ ಬಂದಿರೋದು ಇವನಿಗೆ ಉತ್ತರ ಕೊಡಬೇಕಾ - ಹೆಚ್​.ಡಿ ರೇವಣ್ಣ ವಾಗ್ದಾಳಿ
X

ಹಾಸನ: ಬೇಲೂರು ರಣಘಟ್ಟ ಯೋಜನೆಗೆ ನಾವು ಪೂರ್ಣ ಮಾಡಿದ್ದೇವೆ ಅಂತ ಹೇಳಿದ್ದಾರೆ, ಬಿಜೆಪಿ ಸರ್ಕಾರ ಓನ್ಲಿ ಕಾಮಾಗಾರಿ ತಡೆಹಿಡಿಯುವ ಸರ್ಕಾರ ಕಣ್ರೀ(!) ರಣಘಟ್ಟ ಯೋಜನೆ ಈ ಹಿಂದೆ ಕುಮಾರಸ್ವಾಮಿ ಸರ್ಕಾರದಲ್ಲಿ ಮಾಡಿದ್ದು, ಬಿಜೆಪಿ ಸರ್ಕಾರದ ಸಾಧನೆ ಏನು(?) ಈ ಜಿಲ್ಲೆಗೆ ಕೊಟ್ಟ ಸಾದಾನೆ ಏನು(?) ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರು ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತಿನ್​ ಗಡ್ಕರಿ ಹಾಕಿದ ಪೌಂಡೇಷನ್ ನಿಲ್ಲಿಸಿದ್ದಾರೆ. ನೂರು ಕೋಟಿ ರಣಘಟ್ಟ ಯೋಜನೆಗೆ ಕೊಟ್ಟಿದ್ದು, ಅದರ ಕಾಫಿ ಬೇಕಾದ್ರೆ ಕೊಡುವೆ, ಮಾನ-ಮಾರ್ಯಾದೆ ಇದೆಯಾ ಅವರಿಗೆ ಈ ಜಿಲ್ಲೆ ಬಗ್ಗೆ ಮಾತನಾಡಲಿಕ್ಕೆ ಎಂದು ಗುಡುಗಿದ್ದಾರೆ.

ಇನ್ನು ಚುನಾವಣೆ ಹತ್ತಿರ ಬಂದಾಗ ಈ ರೀತಿ ಹೇಳೂದು ಒಳ್ಳೆಯದಲ್ಲ. ವಸೂಲಿ ಕಾರ್ಯಕ್ರಮ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಅವರು ಹಿರಿಯ ಶಾಸಕರು, ಯಾಕೆ ಈ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ಈ ಜಿಲ್ಲೆಯ ಅಭಿವೃದ್ದಿ ಕಾಮಾಗಾರಿ ಕುಂಠಿತಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಿರುದ್ದ ತಿರುಗೇಟು ನೀಡಿದ್ದಾರೆ.

ಪ್ರೀತಂಗೌಡ ವಿರುದ್ದ ಏಕವಚನದಲ್ಲಿ ವಾಗ್ದಾಳಿ


ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ ಕಾಮನ್ ಸೆನ್ಸ್​ ಇಲ್ಲದೆ ಕೆಲಸ ಕಾಮಾಗಾರಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಆರೋಪದ ಬಗ್ಗೆ ಮಾತನಾಡಿದ ಅವರು, ಅವನ್ಯಾರೋ ಹೇಳಿದ ಅಂತ ನಾನು ರಿಯಾಕ್ಷನ್ ಮಾಡೋಕೆ ಆಗಲ್ಲ. ಇವನಿಗೆ ಉತ್ತರ ಹೇಳೋಕೆ ಹೋದರೆ ನಾನು ಪೊಳ್ಲೆದ್ದು ಹೋಗುತ್ತೇನೆ. ಈ ಕೂಸು ಆಕಸ್ಮಿಕವಾಗಿ ಬಂದಿರೋದು ಇವನಿಗೆ ಉತ್ತರ ಕೊಡಬೇಕಾ(?) ನಾನು ಎಲ್ಲಿ ಹೋಗುತ್ತೇನೆ ಇನ್ನು ಬದುಕಿರುತ್ತೇನೆ. ನನ್ನ ಕೈಯಲ್ಲಿ ಆಗಲಿಲ್ಲ ಅಂದ್ರೆ ಚಿನ್ನದ ತಟ್ಟೆಲಿ ಕೊಡಲಿ ಬಿಡಿ. ರೇವಣ್ಣ ಕಟ್ಟಿಸಿರಿವುದಕ್ಕೆ ಸುಣ್ಣ ಬಣ್ಣ ಹೊಡೆದುಕೊಳ್ಳೋಕೆ ಹೇಳಿ, ಕಾಲ ಎಲ್ಲವನ್ನು ನಿರ್ದರಿಸಲಿದೆ ಎಂದು ಜೆಡಿಎಸ್​ ಶಾಸಕ ಹೆಚ್​ ಡಿ ರೇವಣ್ಣ ಅವರು ಹಾಸನ ಶಾಸಕ ಪ್ರೀತಂ ಗೌಡ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.

Next Story

RELATED STORIES