Top

ದರ್ಶನ್ ಅವರು ಹಾಸನಕ್ಕೆ ಬಂದಿರುವುದಕ್ಕೆ ರಾಜಕೀಯ ಬೆರೆಸುವುದು ಬೇಡ - ಭವಾನಿ ರೇವಣ್ಣ ಸ್ಪಷ್ಟನೆ

ಮುಂಬರುವ ಜಿಲ್ಲಾ ಪಂಚಾಯ್ತಿಗೆ ಸ್ಪರ್ಧಿಸಲು ಇನ್ನೂ ತೀರ್ಮಾನಿಸಿಲ್ಲ

ದರ್ಶನ್ ಅವರು ಹಾಸನಕ್ಕೆ ಬಂದಿರುವುದಕ್ಕೆ ರಾಜಕೀಯ ಬೆರೆಸುವುದು ಬೇಡ - ಭವಾನಿ ರೇವಣ್ಣ ಸ್ಪಷ್ಟನೆ
X

ಹಾಸನ: ಒಬ್ಬರನ್ನು ತುಳಿದು ಒಬ್ಬರು ಬೆಳೆಯುವುದು ರಾಜಕೀಯ ಎಂದು ಹಾಸನ ಜಿಲ್ಲಾ ಪಂಚಾಯ್ತಿ ಸ್ಥಾಯಿಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರು ಬುಧವಾರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇರೆಯವರ ತರ ದರ್ಶನ್ ಬಂದ್ರೆ ನಾನು ಬರಲ್ಲ ಎಂದು ಸಣ್ಣತನ ತೋರಲ್ಲ, ಆಯಾ ಜಿಲ್ಲೆಗೆ, ಆಯಾ ರಾಜಕೀಯ ಸೀಮಿತ, ದರ್ಶನ್ ಪ್ರಜ್ವಲ್ ಎಂಟು ವರ್ಷದಿಂದ ಸ್ನೇಹಿತರು ಎಂದು ಹೇಳಿದರು.

ಇನ್ನು ಅಂಬರೀಶ್ ಪುತ್ರ ಅಭಿಷೇಕ್ ನಮ್ಮ ಮನೆಗೆ ಬರುತ್ತಿದ್ದರು. ದರ್ಶನ್ ಅವರು ಹಾಸನಕ್ಕೆ ಬಂದಿರುವುದಕ್ಕೆ ರಾಜಕೀಯ ಬೆರೆಸುವುದು ಬೇಡ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಯಲಿದೆ ಎಂಬ ಮಾಹಿತಿ ಇದೆ. ಮುಂಬರುವ ಜಿಲ್ಲಾ ಪಂಚಾಯ್ತಿಗೆ ಸ್ಪರ್ಧಿಸಲು ಇನ್ನೂ ತೀರ್ಮಾನಿಸಿಲ್ಲ ಎಂದು ಭವಾನಿ ರೇವಣ್ಣ ಅವರು ಮಾತನಾಡಿದ್ದಾರೆ.

Next Story

RELATED STORIES