Top

ಕೊರೊನಾ ವಿಚಾರ ಮರೆಮಾಚಲು ಸರ್ಕಾರ ಚಿತ್ರನಟಿರನ್ನು ಬಂಧಿಸಿದ್ದಾರೆ - ಡಿ.ಕೆ ಸುರೇಶ್

  • ಮೊದಲು ಡ್ರಗ್​ ಮಾಫಿಯಾದ ಕಿಂಗ್ ಪಿನ್​ಗಳನ್ನು ಬಂಧಿಸಲಿ.
  • ಅಧಿಕಾರಿಗಳ ಮಕ್ಕಳು ಈ ದಂಧೆಯಲ್ಲಿ ಇನ್ವಾಲ್ ಆಗುತ್ತಿದ್ದಾರೆ.
  • ತನಿಖಾ ಸಂದರ್ಭದಲ್ಲಿ ಬೇರೆಯವರ ಹೆಸರು ಹೇಳಿದರು ಅದನ್ನು ಮುಚ್ಚಿಡುತ್ತಿದ್ದಾರೆ.

ಕೊರೊನಾ ವಿಚಾರ ಮರೆಮಾಚಲು ಸರ್ಕಾರ ಚಿತ್ರನಟಿರನ್ನು ಬಂಧಿಸಿದ್ದಾರೆ - ಡಿ.ಕೆ ಸುರೇಶ್
X

ಹಾಸನ: ಡ್ರಗ್ಸ್​ ವಿಚಾರ ಇಟ್ಟುಕೊಂಡು ರಾಜ್ಯದ ಗಮನ ಬೇರೆ ಕಡೆ ಸೆಳೆಯುತ್ತಿದ್ದಾರೆ, ಕಾಲೇಜಿಗೆ ಡ್ರಗ್ಸ್​ ಬರುತ್ತಿದೆ, ಹಳ್ಳಿ-ಹಳ್ಳಿಗೂ ಬರುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಅವರು ಬುಧವಾರ ಹೇಳಿದ್ದಾರೆ.

ಹಾಸನದಲ್ಲಿ ಟಿವಿ5 ಜೊತೆ ಮಾತನಾಡಿದ ಅವರು, ಕೊರೊನಾ ನಿರ್ವಹಣೆ ಬಿಟ್ಟು ಗಮನ ಬೇರೆ ಕಡೆ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ. ಡ್ರಗ್ಸ್​ ಸಪ್ಲೆ ಈ ಹಿಂದೆ ಇತ್ತಲ್ಲಾ(?) ಇದು ಪೊಲೀಸರ ಗಮನಕ್ಕೆ ಬಂದಿರಲಿಲ್ಲವಾ(!?) ಪೊಲೀಸ್ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲ ಆಗಿದೆ ಎಂದು ಆರೋಪ ಮಾಡಿದರು.

ಜನರಿಗೆ ದಿಕ್ಕುತಪ್ಪಿಸುವಂತ ಕೆಲಸ ಮಾಡುತ್ತಿದ್ದಾರೆ ರಾಜ್ಯ ಸರ್ಕಾರದವರು, ಡ್ರಗ್ಸ್ ಮಾಫಿಯಾ ಮಟ್ಟಹಾಕಲು ಪೊಲೀಸರು ಹಾಗೂ ಸರ್ಕಾರ ವಿಫಲ ಆಗಿದೆ. ನಟಿಯರನ್ನು ಬಂಧಿಸುವುದು ಮುಖ್ಯವಲ್ಲ, ಪ್ರಚಾರಕ್ಕಾಗಿ ನಟಿಯರನ್ನು ಬಂಧಿಸಿದ್ದಾರೆ. ಮೊದಲು ಡ್ರಗ್​ ಮಾಫಿಯಾದ ಕಿಂಗ್​ಪಿನ್​ಗಳನ್ನು ಬಂಧಿಸಲಿ. ಚಿತ್ರ ನಟಿಯರನ್ನು ಬಂಧಿಸಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಪೊಲೀಸ್ ಇಲಾಖೆ ನಿನ್ನ ಹೆಸರು ಇದೆ ಎಂದು ದಂಧೆ ಮಾಡುತ್ತಿದ್ದಾರೆ. ವಿದ್ಯಾರ್ಥಿ ಸಮೂಹವೇ ಹಾಳಾಗುತ್ತಿದೆ. ಅಧಿಕಾರಿಗಳ ಮಕ್ಕಳು ಈ ದಂಧೆಯಲ್ಲಿ ಇನ್ವಾಲ್ ಆಗುತ್ತಿದ್ದಾರೆ. ಕೊರೊನಾ ವಿಚಾರವನ್ನು ಮರೆಮಾಚಲು ಸರ್ಕಾರ ಚಲನಚಿತ್ರ ನಟಿಯರನ್ನು ಬಂಧಿಸಿದೆ. ನಟಿಯರನ್ನು ಹಿಡಿದು ದೊಡ್ಡ ಸಾಧನೆ ಮಾಡಿದ್ದೇವೆ ಅಂದುಕೊಂಡಿದ್ದಾರೆ ಇದರ ಹಿಂದೆ ರಾಜಕಾರಣಿಗಳ ಮಕ್ಕಳು ಇದ್ದಾರೆ. ತನಿಖಾ ಸಂದರ್ಭದಲ್ಲಿ ಬೇರೆಯವರ ಹೆಸರು ಹೇಳಿದರು ಅದನ್ನು ಮುಚ್ಚಿಡುತ್ತಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES