ಬಿಎಸ್ವೈ ನಾಯಕತ್ವ ಬದಲಾವಣೆ ಚರ್ಚೆ ಬಗ್ಗೆ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ
ನಾಳೆ ಸಚಿವ ಸಂಪುಟ ವಿಸ್ತರಣೆ ಗ್ಯಾರಂಟಿ. ಅಸಮಾಧಾನಿತರನ್ನು ಸಮಾಧಾನ ಮಾಡಿದ್ದೇವೆ.

ಹಾಸನ: ಹಾಸನ-ಮಂಗಳೂರು ಮಾರ್ಗದ ಕಡೆಗೆ ರಸ್ತೆ ದುರಸ್ತಿ ಕಾರ್ಯ ನೆಡೆಯುತ್ತಿದೆ ಹೀಗಾಗಿ ನಾನು ಇಲ್ಲಿಗೆ ಬಂದು ವಸ್ತು ಸ್ಥಿತಿ ನೋಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಮಂಗಳವಾರ ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗಾಗಲೇ ಹತ್ತು ಕಿಲೋ ಮೀಟರ್ ವರೆಗೆ ರಸ್ತೆ ಕೆಲಸ ಆಗಿದೆ. ಯಾವ ಕಾಲ ಘಟ್ಟದಲ್ಲಿ ಇದು ನಿಂತಿದ್ದು ಅನ್ನೂದು ಗೊತ್ತಿದೆ ಎಂದರು.
ಇನ್ನು ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಮಾಜಿ ಸಿಎಂ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ನಮ್ಮ ಪಾರ್ಟಿಯವರ(?) ಮೊದಲು ಅವರ ಸ್ಥಾನವನ್ನು ಉಳಿಸಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಯಡಿಯ್ಯೂರಪ್ಪ ನಾಯಕತ್ವ ಬದಲಾವಣೆ ವಿಚಾರ, ಇದು ನಿಮ್ಮ ಮಾಧ್ಯಮಗಳ ಸೃಷ್ಟಿ. ನಮ್ಮ ಬಿಜೆಪಿಯಲ್ಲಿ ಯಾರು ಹೇಳಿದ್ದಾರೆ ಹೇಳಿ ನಾಯಕತ್ವ ಬದಲಾಗುತ್ತೆ ಅಂತ(!) ಎಂದು ಹಾಸನದಲ್ಲಿ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಪ್ರಶ್ನೆ ಮಾಡಿದ್ದಾರೆ.
ಸದ್ಯ ನಾಳೆ ಸಚಿವ ಸಂಪುಟ ವಿಸ್ತರಣೆ ಗ್ಯಾರಂಟಿ. ಅಸಮಾಧಾನಿತರನ್ನು ಸಮಾಧಾನ ಮಾಡಿದ್ದೇವೆ. ಯಾರು ಸಚಿವರಾಗುತ್ತಾರೆ ಎಂಬುದನ್ನು ಸಿಎಂ ತಿರ್ಮಾನ ಮಾಡುತ್ತಾರೆ. ಯಾರ್ಯಾರು ಮಂತ್ರಿ ಆಗುತ್ತಾರೆ ಅನ್ನುತ್ತಾರೆ ಎಂಬುದನ್ನು ಕಾದು ನೋಡಿ ಎಂದಿದ್ದಾರೆ.