Top

ಹೆದ್ದಾರಿ ಕುಸಿತ: ಸಕಲೇಶಪುರ ಶಿರಾಡಿಘಾಟ್ ಮಾರ್ಗ ಬಂದ್

ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ನಿರಂತರವಾಗಿ ಕುಸಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ಬಂದ್

ಹೆದ್ದಾರಿ ಕುಸಿತ: ಸಕಲೇಶಪುರ ಶಿರಾಡಿಘಾಟ್ ಮಾರ್ಗ ಬಂದ್
X

ಹಾಸನ: ನಿರಂತರ ಮಳೆಯಿಂದ ಸಕಲೇಶಪುರ ಬಳಿ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ರಸ್ತೆ ಕುಸಿತ ಉಂಟಾಗಿದ್ದು, ಸಕಲೇಶಪುರ ಶಿರಾಡಿಘಾಟ್ ಮಾರ್ಗ ಬಂದ್ ಆಗಿದೆ.

ಸಕಲೇಶಪುರದ ಸಮೀಪ ದೋಣಿಗಾಲ್ ಬಳಿ ಹಾಸನದಿಂದ‌ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೭೫ ಕುಸಿದಿದ್ದು, ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಬಂದ್​ ಆಗಿದೆ. ಸದ್ಯ ಮೂಡಿಗೆರೆ, ಹಾನಬಾಳು, ಕೊಟ್ಟಿಗೆಹಾರದ ಮೂಲಕ ಪ್ರಯಾಣಿಕರಿಗೆ ಬದಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ನಿರಂತರವಾಗಿ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಸಂಚಾರ ಬಂದ್ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಎಸಿ ಪ್ರತೀಕ್, ತಹಶಿಲ್ದಾರ್ ಜಯಕುಮಾರ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Next Story

RELATED STORIES