Top

ಜಿಲ್ಲಾಸ್ಪತ್ರೆಗೆ ಪ್ರಜ್ವಲ್​​ ರೇವಣ್ಣ ಭೇಟಿ: ಹೆಚ್ಚಿನ ರೆಮಿಡಿಸಿವರ್​ ಒದಗಿಸುವ ಭರವಸೆ

ಕೋವಿಡ್ ನಿರ್ವಹಣೆ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲ ಆಗಿದೆ

ಜಿಲ್ಲಾಸ್ಪತ್ರೆಗೆ ಪ್ರಜ್ವಲ್​​ ರೇವಣ್ಣ ಭೇಟಿ: ಹೆಚ್ಚಿನ ರೆಮಿಡಿಸಿವರ್​ ಒದಗಿಸುವ ಭರವಸೆ
X

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಸೋಂಕಿತರ ಚಿಕಿತ್ಸೆ ಹಾಗೂ ಆಸ್ಪತ್ರೆ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೋವಿಡ್​ ನಿರ್ವಹಣೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇನ್ಮುಂದೆ ಹಾಸನದಲ್ಲಿ ಬೆಡ್​ಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಒಂದಿಷ್ಟು ರೆಮಿಡಿಸಿವರ್ ಕೊರತೆ ಇದೆ ಅದನ್ನು ಸಹ ಸರಿ ಪಡಿಸುತ್ತೇವೆ ಎಂಬ ಭರವಸೆ ನೀಡಿದರು.

ಇನ್ನು ಬೆಂಗಳೂರಿನಲ್ಲಿ ಬೆಡ್​ ಬ್ಲಾಕಿಂಗ್​ ದಂಧೆ ಕುರಿತು ಮಾತನಾಡಿದ ಪ್ರಜ್ವಲ್​ ರೇವಣ್ಣ, ಸಂಸದ ತೇಜಸ್ವಿ ಸೂರ್ಯ ಒಳ್ಳೆ ಕೆಲಸ ಮಾಡಿದ್ದಾರೆ. ಆದರೆ ಇಂತಹ ವಿಚಾರದಲ್ಲಿ ಅವರದೇ ಸರ್ಕಾರ ಇದ್ದರೂ ಎಲ್ಲರೂ ಫೈಲೂರ್​ ಆಗಿದ್ದಾರೆ ಎಂದರು.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳ ತಲೆದಂಡ ಆಗಬೇಕಿತ್ತು. ಅದ್ರೆ ಯಾರ ಒಬ್ಬರ ಅಧಿಕಾರಿ ತಲೆದಂಡ ಆಗಿಲ್ಲ. ಕೋವಿಡ್ ನಿರ್ವಹಣೆ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ ಆಕ್ರೋಶ ಹೊರಹಾಕಿದರು.

Next Story

RELATED STORIES