Top

ರಾಜ್ಯ ರಾಜಕೀಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಭವಿಷ್ಯ ನುಡಿದ ಕೋಡಿ ಶ್ರೀಗಳು

ಕೊರೊನಾ ರೂಪಾಂತರ ಬಗ್ಗೆ ಎರಡು ತಿಂಗಳ ಹಿಂದೇಯೇ ಹೇಳಿದ್ದೆ

ರಾಜ್ಯ ರಾಜಕೀಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಭವಿಷ್ಯ ನುಡಿದ ಕೋಡಿ ಶ್ರೀಗಳು
X

ಹಾಸನ: ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ. ರಾಜ್ಯ ಮಾತ್ರವಲ್ಲ ಭಾರತ ಹಾಗೂ ಜಾಗತಿಕ ಮಟ್ಟದಲ್ಲೇ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಕೋಡಿಶ್ರೀಗಳು ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಅರಸೀಕೆರೆ ಹಾರನಹಳ್ಳಿದಲ್ಲಿಂದು ಮಾತನಾಡಿದ ಅವರು, ಈ ಎಲ್ಲ ಬೆಳೆವಣಿಗಳಿಗೆ ಕಾರಣ ಈಗ ಬಂದಿರಿವ ಗ್ರಹಣಗಳೇ ಅದರ ಸಂಕೇತಗಳು, ನನಗೆ ಸಧ್ಯದ ಭವಿಷ್ಯ ಗೋಚರ ಪ್ರಕಾರ ನೀರು ಕಾಣುತ್ತಿದೆ, ಪುನಃ ಅಕಾಲಿಕ ಮಳೆ ಅನಾಹುತಗಳಿ ಸಾಧ್ಯತೆ ಹೆಚ್ಚಾಗಿದೆ. ಯಾವಾಗ ಬೇಕಾದ್ರೂ ಮಳೆಯಾಗುವ ಸಂಭವವಿದೆ ಎಂದು ಹೇಳಿದ್ದಾರೆ.


ಕೊರೊನಾ ರೂಪಾಂತರ ಬಗ್ಗೆ ಎರಡು ತಿಂಗಳ ಹಿಂದೇಯೇ ಹೇಳಿದ್ದೆ, ಕೊರೊನಾ ಸಂಪೂರ್ಣ ಹೋಗಲು 10 ವರ್ಷ ಬೇಕು. ಭೂಮಿ ನಿಸಾರಗೊಂಡಿದೆ ಅಂದರೆ ಸತ್ವ ಕಳೆದುಕೊಂಡಿದೆ. ಈಗಿನ ಔಷದಿಗಳೇ ಮನುಷ್ಯನ ಆರೋಗ್ಯಕ್ಕೆ ಮಾರಕವಾಗಲಿದೆ ಎಂದರು.

ಇನ್ನು ಅರಸ ಪ್ರಜಾ ವಿರೋಧಿ ಕಾಯ್ದೆ ತರುತ್ತಾನೆಂದು, ಪ್ರಜೇ ವಿರೋಧ ಮಾಡಿ ಅರಸು ಸಿಂಹಾಸನಕ್ಕೆ ತೊಂದರೆ ಕೊಡುತ್ತಾರೆಂದು ಹಿಂದೇಯೇ ಹೇಳಿದ್ದೆ. ಅದರಂತೆ ನೋವು ನೋಡಿದರಲ್ಲಾ ರೈತ ವಿರೋಧಿ ಕಾಯಿದೆ ಜಾರಿ ಮಾಡಲು ಆಗ್ತಾನೆ ಇಲ್ಲ, ಸತ್ವ ಇಲ್ಲ ಭೂಮಿಯಲ್ಲೆ ರಸಾಯನಿಕ ಬೆಳೆ ಬೆಳೆಯೋದು ಹೆಚ್ಚಾಗಿದೆ, ಗೋವುಗಳಿಂದ ಬೆಳೆದ ಆಹಾರ, ರಾಸಾಯನಿಕ ಮುಕ್ತ ಮಾತ್ರ ಮಮದೆ ಮನುಷ್ಯನನ್ನ ಕಾಪಾಡ ಬಲ್ಲದು ಎಂದು ಕೋಡಿ ಮಠದ ಶ್ರೀಗಳು ಹೇಳಿದರು.

Next Story

RELATED STORIES