ನಾನೊಬ್ಬ ಪೋಷಕನಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ - ಶಾಸಕ ಪ್ರೀತಂ ಗೌಡ
ಹಾಸನ ನಗರಸಭೆ ಬಿಜೆಪಿ ಈ ಬಾರಿ ಚುಕ್ಕಾಣಿ ಹಿಡಿಯುವುದು ಖಂಡಿತ. ಇತಿಹಾಸ ಬರೆಯಲಿದೆ ಬರೆದಿಟ್ಟುಕೊಳ್ಳಿ.

ಹಾಸನ: ನಾನು ಮಾಜಿ ಸಚಿವ ರೇವಣ್ಣನವರೊಷ್ಟು ದೊಡ್ಡವನಲ್ಲ, ಅವರು ತಿಳಿದು ಮಾತನಾಡಬೇಕು, ನಗರಸಭೆಯನ್ನು ನಗರ ಪಾಲಿಕೆ ಮಾಡಿದ್ದು ಸಾಮಾನ್ಯ ಶಾಸಕ ಪ್ರೀತಂ ಗೌಡ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಹಾಸನದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಶ್ರವಣ ಬೆಳಗೂಳದ ಗೋಮ್ಮಟೇಶ್ವರನನ್ನು ನಾನೇ ಮಾಡಿದ್ದು ಹಳೇಬೀಡು ಬೇಲೂರು ಕಟ್ಟಿಸಿದ್ದು, ನಾನೇ ಅಂತ ಹೇಳುತ್ತಾರೆ ಸನ್ಮಾನ್ಯ ರೇವಣ್ಣ. ಜೋಯಿಸ್ರ ಕೆಲಸ ಮಾಡಲಿಕ್ಕೆ ಶಾಸಕ ಪ್ರೀತಂ ಗೌಡ ಬೇಕಿತ್ತು. ಪ್ರಾಮಾಣಿಕವಾಗಿ ಜನರ ಪರ ಕೂಲಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಇನ್ನು ಕನಸನ್ನು ಯಾರು ಬೇಕಾದ್ರು ಕಾಣುತ್ತಾರೆ, ಅದನ್ನು ಸಹಾಕಾರ ಮಾಡುಬೇಕು. ಯಾರು ಕೆಲಸ ಮಾಡುತ್ತಿದ್ದಾರೆ ಅನ್ನೂದು ಹಾಸನ ಜನ್ರಿಗೆ ಗೊತ್ತಿದೆ. ಹಾಸನ ನಗರಸಭೆ ಬಿಜೆಪಿ ಈ ಬಾರಿ ಚುಕ್ಕಾಣಿ ಹಿಡಿಯುವುದು ಖಂಡಿತ. ಇತಿಹಾಸ ಬರೆಯಲಿದೆ ಬರೆದಿಟ್ಟುಕೊಳ್ಳಿ ಎಂದು ವಿಶ್ವಾಸದ ಮಾತುಗಳನ್ನು ಆಡಿದ್ದಾರೆ
ಸದ್ಯ ನನಗೆ ಎರಡು ಮಕ್ಕಳಿದ್ದಾರೆ, ನಾನು ಒಬ್ಬ ಪೋಷಕನಾಗಿ ನಾನು ನನ್ನ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ನನಗೆ ನನ್ನ ಕುಟುಂಬ ಮುಖ್ಯ. ನಾನು ನನ್ನ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಆದರೆ, ಶಾಸಕನಾಗಿ ಶಾಲೆ ಓಪನ್ ಆಗುವುದಕ್ಕೆ ಮುಂದಿನ ದಿನಗಳಲ್ಲಿ ಸರ್ಕಾರದ ತೀರ್ಮಾನಕ್ಕೆ ಬದ್ಧ ಎಂದು ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಶಾಲೆ ಓಪನ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.