Top

ಕಾಂಗ್ರೆಸ್​-ಬಿಜೆಪಿ ಬಿಡುವವರಿದ್ದಾರೆ, ಯಾರ್ಯಾರು ಬರ್ತಾರೋ ಬರಲಿ - ಮಾಜಿ ಸಚಿವ ಹೆಚ್​.ಡಿ ರೇವಣ್ಣ

ವ್ಯಾಪಾರ ಮಾಡುವಂತಹ ಗ್ರಾಮ ಸ್ವರಾಜ್ಯ ಸಮಾವೇಶ

ಕಾಂಗ್ರೆಸ್​-ಬಿಜೆಪಿ ಬಿಡುವವರಿದ್ದಾರೆ, ಯಾರ್ಯಾರು ಬರ್ತಾರೋ ಬರಲಿ - ಮಾಜಿ ಸಚಿವ ಹೆಚ್​.ಡಿ ರೇವಣ್ಣ
X

ಹಾಸನ: ಗ್ರಾಮ ಪಂಚಾಯ್ತಿ ಚುನಾವಣೆಗೆ ಸರ್ಕಾರ ಹಿಂದೆಟಾಕುತ್ತಿತ್ತು. ರಾಜ್ಯದ ನ್ಯಾಯಾಲಯದ ಆದೇಶದಿಂದ ಎಚ್ಚರಗೊಂಡಿದೆ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರು ರಾಜ್ಯ ಸರ್ಕಾರ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಡಳಿತಾಧಿಕಾರಿಗಳ ಮೂಲಕ ರಾಜ್ಯವನ್ನ ಲೂಟಿ ಮಾಡೋಕೆ ಪ್ರಯತ್ನ ಮಾಡುತ್ತಿದ್ದು, ನ್ಯಾಯಯುತವಾಗಿ ಚುನಾವಣೆ ನಡೆಯಬೇಕು, ಪಿಡಿಓಗಳು ಪಂಚಾಯ್ತಿ ಅಭ್ಯರ್ಥಿಗಳಿಗೆ ಹಣ ಕೊಡಬೇಕೆಂದು ಬಿಜೆಪಿಯ ಉನ್ನತ ರಾಜಕೀಯ ಮುಖಂಡರು ಆದೇಶ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶ ಮಾಡಬೇಕು. ಬಿಜೆಪಿ ನಾಯಕರು ಬಂದು ವೋಟು ಕೇಳಲು ನೈತಿಕತೆ ಇದ್ಯಾ(?) ಮಾನ ಮರ್ಯಾದೆ ಇದ್ರೆ ವೋಟ್ ಕೇಳಲು ಬಿಜೆಪಿಯವರು ಬರಬಾರದು ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಸದ್ಯ ಎಲ್ಲಾ ಸಮಾಜವನ್ನ ಓಲೈಸುವುದನ್ನ ಬಿಡಬೇಕು. ವ್ಯಾಪಾರ ಮಾಡುವಂತಹ ಗ್ರಾಮ ಸ್ವರಾಜ್ಯ ಸಮಾವೇಶ, ಹಾಸನ-ಬೇಲೂರು-ಬಿಳಿಕೆರೆ 1,250 ಕೋಟಿಗೆ ಅನುಮತಿ ರಸ್ತೆಯನ್ನ ತಡೆಯಿಡಿಯಲಾಗಿದೆ, ದ್ವೇಷದ ರಾಜಕಾರಣ ಅಲ್ಲ ಅಂದ್ ಹಾಸನ ನಗರಸಭೆಯಲ್ಲಿ ರಾಜಕೀಯ ದ್ವೇಷ ಮಾಡುತ್ತಿಲ್ವಾ(?) ದುಡ್ಡು ಕಲೆಕ್ಟ್​​ ಮಾಡೋರೆ ಒಬ್ಬರಿದ್ದಾರೆ ಎಂದಿದ್ದಾರೆ.

ಇನ್ನು ಎರಡು ರಾಷ್ಟ್ರೀಯ ಪಕ್ಷದವರಿಂದ ದೂರವಿದ್ದೇವೆ. ಮೂರೇ ಕ್ಷೇತ್ರದಲ್ಲಿ ಆದಾಯ ತೆರಿಗೆ ದಾಳಿ ನಡೆದಿದ್ದು. ಹಾಸನ-ನಗರಕ್ಕೆ 70 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನೀಡಿದ್ದೇನೆ. ಚನ್ನಪಟ್ಟಣದ ಕೆರೆ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಪರ್ಸೆಂಟೆಜ್​ ಸರ್ಕಾರ ಎಂದರು ಈಗ ಏನಾಗಿದೆ. ಕಾಂಗ್ರೆಸ್​-ಬಿಜೆಪಿ ಬಿಡುವವರಿದ್ದಾರೆ. ಯಾರ್ಯಾರು ಬರ್ತಾರೋ ಬರಲಿ ಎಂದು ಹೆಚ್​.ಡಿ ರೇವಣ್ಣ ಅವರು ಹೇಳಿದರು.

Next Story

RELATED STORIES