Top

ಚರ್ಚ್ ಗೋಲ್ ಮಾಲ್: ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್​ ಪ್ರತಿಭಟನೆ

ದೂರು ಸಲ್ಲಿಸಿದ್ದಕ್ಕೆ ಕೆಲ ಕ್ರೈಸ್ಥ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ದೂರುದಾರನ ವಿರುದ್ದ ಬೃಹತ್ ಪ್ರತಿಭಟನೆ ಮಾಡಿದರು.

ಚರ್ಚ್ ಗೋಲ್ ಮಾಲ್: ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್​ ಪ್ರತಿಭಟನೆ
X

ಹಾಸನ: ಸರ್ಕಾರ ಚರ್ಚಗಳಿಗೆ ಅಂತಾ ಹಣ ಬಿಡುಗಡೆ ಮಾಡುತ್ತೆ.ಅದ್ರೆ ಕೊಟ್ಯಾಂತರ ಹಣ ದುರ್ಬಳಕೆ ಆಗಿದೆ. ಒಂದು ಕಡೆ ಚರ್ಚ್ ಪೋಟೊ ಚನ್ನಾಗಿ ಪೋಟೊ ಬಳಕೆ ಮಾಡಿದರೆ ಮತ್ತೊಂದು ಕಡೆ ಬಿರುಕು ಬಿಟ್ಟಿರುವ ಪೋಟೋ. ಇದೆನೆಲ್ಲ ತನಿಖೆ ಮಾಡಿ ಅಂತ ಜಿಲ್ಲಾಧಿಕಾರಿಗಳ ಕಛೇರಿಗೆ ದೂರು ಸಲ್ಲಿಸಿದ್ದಕ್ಕೆ ಕೆಲ ಕ್ರೈಸ್ಥ ಮುಖಂಡರು ಕಚೇರಿ ಮುಂದೆಯೇ ದೂರುದಾರನ ವಿರುದ್ದ ಬೃಹತ್ ಪ್ರತಿಭಟನೆ ಮಾಡಿದರು.

ಇಂದು ಹಾಸನ ಜಿಲ್ಲೆಯಲ್ಲಿ ಕೆಲವೂಂದು ಚರ್ಚ್ ಫಾದರ್ಗಳು ಸೇರಿದಂತೆ ನೂರಾರು ಕ್ರೈಸ್ಥ ಸಮುದಾಯದವರು ಹಾಸನ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದೂರುದಾರ ಫ್ರಾನ್ಸೀಸ್ ವಿರುದ್ದ ಪ್ರತಿಭಟನೆ ನಡೆಸಿದರು. ನಮ್ಮ ಸಮುದಾಯವನ್ನು ಎತ್ತಿಗಟ್ಟುವ ಕೆಲಸ ಮಾಡುತ್ತಿದ್ದಾನೆ ಜೊತೆಗೆ ಕೆಲ ಕ್ರೈಸ್ಥ ಫಾದರ್ ಮೇಲೆ ಹಣ ದುರ್ಬಳಕೆ ಆಗಿದೆ ಅಂತ ಸುಳ್ಳು ಹೇಳಿ ತಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಧಿಕ್ಕಾರ ಕೂಗಿದ್ದರು. ಇದೇ ಸಂದರ್ಭದಲ್ಲಿ ಫ್ರಾನ್ಸೀಸ್ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕ್ರೈಸ್ಥ ಸಮುದಾಯದ ಅದ್ಯಕ್ಷರು ನಮ್ಮ ಗುರುಗಳ ಮೇಲೆ ನಿರಾದಾರವಾದ ಆರೋಪ ಮಾಡುತ್ತಿದ್ದಾರೆ,ನಾವು ಯಾವುದೇ ಹಣ ದುರ್ಭಳಕೆ ಮಾಡಿಲ್ಲ ಅಂತಾ ಹೇಳದರು.

ಇನ್ನು ದೂರುದಾರ ಪ್ರಾನ್ಸೀಸ್ ಮಾತ್ರ, ಹಾಸನ ಜಿಲ್ಲೆಯಲ್ಲಿ ಕೆಲವೂಂದು ಚರ್ಚ್ ನ ಫಾದರ್​ಗಳು ಸರ್ಕಾರದ 15 ಕೋಟಿ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಒಂದು ಕಡೆ ಬಿರುಕು ಬಿಟ್ಟ ಚರ್ಚ್ ಪೋಟೊ ತೆಗೆಸಿ ಅದನ್ನು ಪೊಟೋ ಶಾಪ್ ಮಾಡಿ ಬಿಲ್ ಮಾಡಿಸಿಕೊಂಡು ಹಣ ದುರ್ಬಳಕೆ ಮಾಡಿದ್ದಾರೆ. ಇದಕ್ಕೆ ಸಂಭಂದ ಪಟ್ಟ ದಖಾಲೆ ನನ್ನ ಬಳಿ ಇದೆ. ನಾನು ಈಗಾಗಗಲೇ ಡಿಸಿ ಕಚೇರಿಗೆ ಈ ಹಿಂದೆ ದೂರು ಕೊಟ್ಟಿದ್ದೆನೆ. ಕೇಸ್ ತನಿಖಾ ಹಂತದಲ್ಲಿ ಇರಬೇಕಾದ್ರೆ ಪ್ರತಿಭಟನೆ ಮಾಡಿದ್ದಾರೆ ಮಾಡಲಿ ನಾನೆಂತು ನನ್ನ ಹೇಳಿಕೆಗಳಿಗೆ ಬದ್ದನಾಗಿದ್ದೆನೆ. ನಾನು ನನ್ನ ಸಮುದಾಯದ ಎಲ್ಲ ಫಾದರ್​ಗಳ ಬಗ್ಗೆ ಮಾತನಾಡುತ್ತಿಲ್ಲ ಕೆಲ ಫಾದರ್​ಗಳ ವಿರುದ್ದ ಮಾತ್ರ ಧ್ವನಿ ಎತ್ತಿದ್ದೇನೆ ಎಂದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಚರ್ಚ್ ಹೆಸರಿನಲ್ಲಿ ಕೋಟಿ ಕೋಟಿ ಹಣ ದುರ್ಬಳಕೆ ಆಗಿದೆ ಎಂದು ದೂರುದಾರ ಪ್ರಾನ್ಸೀಸ್ ದೂರು ಕೊಟ್ಟಿದ್ದಾರೆ. ಇತ್ತ ಅದೇ ಸಮುದಾಯದ ಫಾದರ್ ಗಳು ಪ್ರಾನ್ಸೀಸ್ ವಿರುದ್ದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರಾನ್ಸೀಸ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಅವರ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ಅಧಿಕಾರಿಗಳು ನಿಸ್ಪಕ್ಷಪಾತವಾದ ತನಿಖೆ ನಡೆದ್ರೆ ಸತ್ಯ ಯಾವುದು ಅಂತ ಗೊತ್ತಾಗಲಿದೆ.

Next Story

RELATED STORIES