Top

ಹುಬ್ಬಳ್ಳಿಯಲ್ಲಿ ಯುವಕನ ಭೀಕರ ಹತ್ಯೆ ಬೆಚ್ಚಿಬಿದ್ದ ಜನ

ಮಾಟ..ಮಂತ್ರಕ್ಕಾಗಿ ನಡೀತಾ ಯುವಕನ ಬರ್ಭರ ಹತ್ಯೆ..?

ಹುಬ್ಬಳ್ಳಿಯಲ್ಲಿ ಯುವಕನ ಭೀಕರ ಹತ್ಯೆ ಬೆಚ್ಚಿಬಿದ್ದ ಜನ
X

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವಕನ ರುಂಡ ಪತ್ತೆಯಾಗಿದ್ದು, ಸುತ್ತಮುತ್ತಲಿನ ಜನ ಬೆಚ್ಚಿ ಬಿದ್ದಿದ್ದಾರೆ.

ಇಂದು ಬೆಳಿಗ್ಗೆ ಯುವಕನ ರುಂಡ ಪತ್ತೆಯಾಗಿದ್ದು, ಮಧ್ಯಾನದ ವೇಳೆಗೆ ಮತ್ತೊಂದು ಕಡೆ ಯುವಕನ ಶರೀರ ಪತ್ತೆಯಾಗಿದೆ. ಯುವಕನನ್ನು ಕೊಲೆ ಮಾಡಿ ಬಿಸಾಡಿರುವ ಶಂಕೆ ದಟ್ಟವಾಗಿದ್ದು, ಮಾಟ ಮಂತ್ರಕ್ಕಾಗಿ ಈ ರೀತಿ ಬರ್ಭರವಾಗಿ ಹತ್ಯೆ ಮಾಡಿದ್ದಾರೆ ಎನ್ನುವ ಅನುಮಾನವಿದೆ ಎನ್ನಲಾಗಿದೆ.

ಇನ್ನು ಕೇಶ್ವಾಪುರ ಹಾಗೂ ಹುಬ್ಬಳ್ಳಿಯ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಎರಡೂ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Next Story

RELATED STORIES