Top

ಯೋಗೀಶ್​​ ಗೌಡ ಕೊಲೆ ಪ್ರಕರಣ: KAS ಅಧಿಕಾರಿ ಸೋಮು ನ್ಯಾಮಗೌಡ ಅರೆಸ್ಟ್​​

14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್​ ಆದೇಶ

ಯೋಗೀಶ್​​ ಗೌಡ ಕೊಲೆ ಪ್ರಕರಣ: KAS ಅಧಿಕಾರಿ ಸೋಮು ನ್ಯಾಮಗೌಡ ಅರೆಸ್ಟ್​​
X

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್​​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಎಸ್​ ಅಧಿಕಾರಿ ಸೋಮು ನ್ಯಾಮಗೌಡಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ.

ಯೋಗೀಶ್​​ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಮೊನ್ನೆ ನ್ಯಾಮಗೌಡರನ್ನು ಗದಗದಲ್ಲಿ ಬಂಧಿಸಿದ್ದರು. ಎರಡು ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಸೋಮು ನ್ಯಾಮಗೌಡರನ್ನ​ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸದ್ಯ ಸೋಮು ನ್ಯಾಮಗೌಡರನ್ನ ಧಾರವಾಡ ಕೇಂದ್ರ ಕಾರಗೃಹ ಬಂಧನದಲ್ಲಿರಿಸಲಾಗಿದ್ದು,​ ವಿಚಾರಣೆ ಮುಂದುವರಿದಿದೆ.

Next Story

RELATED STORIES