Top

ಕುಮಾರಸ್ವಾಮಿ ಸಿಎಂ ಇದ್ದಾಗ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ - ಸಿದ್ದರಾಮಯ್ಯ

ಬಿಜೆಪಿಯ ಆಂತರಿಕ ವಿಚಾರಕ್ಕೆ ನಾವು ಹೋಗುವುದಿಲ್ಲ. ತಾವೇ ಹೊಡೆದಾಡಿಕೊಂಡು ಸರ್ಕಾರ ಬಿದ್ರೆ, ಚುನಾವಣೆ ಎದುರಿಸಲು ನಾವು ಸಿದ್ಧ

ಕುಮಾರಸ್ವಾಮಿ ಸಿಎಂ ಇದ್ದಾಗ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ - ಸಿದ್ದರಾಮಯ್ಯ
X

ಹುಬ್ಬಳ್ಳಿ-ಧಾರವಾಡ: ಬಿಜೆಪಿಯ ಆಂತರಿಕ ವಿಚಾರಕ್ಕೆ ನಾವು ಹೋಗುವುದಿಲ್ಲ. ತಾವೇ ಹೊಡೆದಾಡಿಕೊಂಡು ಸರ್ಕಾರ ಬಿದ್ರೆ, ಚುನಾವಣೆ ಎದುರಿಸಲು ನಾವು ಸಿದ್ದ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಆ ಪಕ್ಷಕ್ಕೆ ಬಿಟ್ಟಿದ್ದು, ಮತ್ತೆ ನಾವೇನು ಹೇಳೋಲ್ಲ. ಕುಮಾರಸ್ವಾಮಿ ಸರ್ಕಾರ ಬೀಳಲಿಕ್ಕೆ ಸಿದ್ದರಾಮಯ್ಯ ಕಾರಣ ಎಂದು ಹೆಚ್‌ಡಿಕೆ ಹೇಳ್ತಾ ಇದ್ದಾರೆ. ಚುನಾವಣೆ ಬಂದಾಗ ಈ ವೀಚಾರ ಹೇಳುವ ಉದ್ದೇಶವೇನು(?) ಯಡಿಯೂರಪ್ಪ ಸರ್ಕಾರ ಬಂದ್ಮೇಲೆ 1.30 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಎಂದರು.

ಸದ್ಯ ನಾನು ಐದು ವರ್ಷ ಸಿಎಂ ಇದ್ದಾಗ ಯಾವೊಬ್ಬ ಎಂ‌ಎಲ್‌ಎ ನನ್ನ ವಿರುದ್ಧವಾಗಿ ಇರಲಿಲ್ಲ . ಈಗ ಯಾಕೆ ಹೀಗಾಗುತ್ತಿದೆ. ಕುಮಾರಸ್ವಾಮಿ ಸಿಎಂ ಇದ್ದಾಗ ಶಾಸಕರುಗಳನ್ನ ಸರಿಯಾಗಿ ನೋಡಿಕೊಳ್ಳಲಿಲ್ಲ. ಅವರ ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡಿದ್ರೆ, ಅವರೇಕೆ ಸರ್ಕಾರ ಬೀಳಿಸುತ್ತಿದ್ದರು . ಕುಣಿಯಲು ಬರದವರು ನೆಲ ಡೊಂಕು ಎಂದು‌ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.

ಮಥುರಾ ವಿವಾದದ ಬಗ್ಗೆ ಸಿ.ಟಿ. ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಥುರಾ ವಿಚಾರ ಜನರ ಸಮಸ್ಯೆ ಅಲ್ಲ. ಗೊಂದಲ, ಕೋಮವಾದ ಸೃಷ್ಟಿ ಮಾಡೋದಕ್ಕೆ ನಡೀತಿರೊ ಪ್ರಯತ್ನ ಎಂದು ಸಿಟಿ ರವಿಗೆ ತಿರುಗೇಟು ನೀಡಿದ್ರು. ಪ್ರವಾಹ ನಿರ್ವಹಣೆ ವಿಚಾರವಾಗಿ ಇದೇ ತಿಂಗಳು 25, 26, 27 ರಂದು ಬೆಳಗಾವಿ, ವಿಜಾಪುರ , ರಾಯಚೂರು, ಕಲಬುರ್ಗಿ ಸೇರಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಮಾಡುತ್ತೇನೆ. ನಾನು ಏರಿಯಲ್ ಸಮೀಕ್ಷೆ ಮಾಡದೇ, ಕಾರಿನಲ್ಲಿ ಹೋಗಿ ಜನರ ಸಮಸ್ಯೆ ಆಲಿಸುತ್ತೇನೆ. ಈ ಬಾರಿ 15 ಸಾವಿರ ಕೋಟಿ ನಷ್ಟವಾಗಿದೆ. ಈ ವರೆಗೂ ಕೇಂದ್ರ ತಂಡ ಭೇಟಿ ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Next Story

RELATED STORIES