Top

ಎಪಿಎಂಸಿ ಅಂಗಡಿಗೆ ಕನ್ನ ಹಾಕ್ತಿದ ಆರೋಪಿ ಅರೆಸ್ಟ್​

ಆರೋಪಿಯಿಂದ ₹2.80 ಲಕ್ಷ ನಗದು ಹಾಗೂ ಒಂದು ಸ್ವಿಫ್ಟ್ ಕಾರ್ ವಶ

ಎಪಿಎಂಸಿ ಅಂಗಡಿಗೆ ಕನ್ನ ಹಾಕ್ತಿದ ಆರೋಪಿ ಅರೆಸ್ಟ್​
X

ಹುಬ್ಬಳ್ಳಿ: ಎಪಿಎಂಸಿ ಅಂಗಡಿಗಳನ್ನೇ ಟಾರ್ಗೆಟ್​ ಮಾಡಿ ಕನ್ನ ಹಾಕುತ್ತಿದ್ದ ಆರೋಪಿಯನ್ನು ಹುಬ್ಬಳ್ಳಿಯ ನವನಗರ ಕೇಶ್ವಾಪೂರ ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ಮಹಮ್ಮದ್ ಇಕ್ವಾಲ್(56) ಬಂಧಿತ ಆರೋಪಿ.

ಆರೋಪಿ ಕಳೆದ ಫೆಬ್ರವರಿ 8ರಂದು ಸೈಯದ್ ಸಾಬ ಲಿಂಬುವಾಲೆ ಎಂಬುವವರ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಮೆಣಸಿನಕಾಯಿ ಅಂಗಡಿ ನುಗ್ಗಿ ಕ್ಯಾಶ್ ಕೌಂಟರ್​​ನಲ್ಲಿದ್ದ ₹4.86 ಲಕ್ಷ ನಗದು ಕದ್ದು ಪರಾರಿಯಾಗಿದ್ದ.

ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನನು ಬಂಧಿಸಿದ್ದಾರೆ. ಬಂಧಿತನಿಂದ ₹2.80 ಲಕ್ಷ ನಗದು, ಒಂದು ಸ್ವಿಫ್ಟ್ ಕಾರ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Next Story

RELATED STORIES