Top

ಬಿಜೆಪಿಯವರು ಸರಕಾರ ಬೀಳಿಸಿಕೊಳ್ಳಲು ಹೋಗಲ್ಲ- ಮಾಜಿ ಸಿಎಂ ಸಿದ್ದರಾಮಯ್ಯ

ನನಗಿರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಬದಲಾದ್ರೆ ಮತ್ತೊಬ್ಬರು ಸಿಎಂ ಆಗಬಹುದು

ಬಿಜೆಪಿಯವರು ಸರಕಾರ ಬೀಳಿಸಿಕೊಳ್ಳಲು ಹೋಗಲ್ಲ- ಮಾಜಿ ಸಿಎಂ ಸಿದ್ದರಾಮಯ್ಯ
X

ಹುಬ್ಬಳ್ಳಿ-ಧಾರವಾಡ: ಸಿಎಂ ಬದಲಾವಣೆ ಆಗ್ತಾರೆ ಎನ್ನುವುದನ್ನ ಬಿಜೆಪಿಯವರೇ ನನಗೆ ಹೇಳಿದ್ದಾರೆ. ಆರ್​ಆರ್​ಎಸ್​ನವರು ನನಗೆ ಮಾಹಿತಿ ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯೋದು ಸತ್ಯ ಎಂಬುದನ್ನು ಒತ್ತಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಏಕೆ ಯಡಿಯೂರಪ್ಪನವರಿಗೆ ಮಂತ್ರಿಮಂಡಲ ವಿಸ್ತರಣೆಗೆ ಅವಕಾಶ ಕೊಟ್ಟಿರಲಿಲ್ಲ(?) ಅವರನ್ನೇ ಸಿಎಂ ಆಗಿ ಮುಂದುವರೆಸುದಾಗಿದ್ರೆ ಇಷ್ಟು ದಿನ ಏಕೆ ಅವಕಾಶ ಕೊಟ್ಟಿರಲಿಲ್ಲ. ಉಪಚುನಾವಣೆಗಳು ನಡೆದು ಎಷ್ಟು ದಿನಗಳಾಯ್ತು(?) ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಗಳಿಗೆ ಅವಕಾಶ ಕೊಟ್ಟಿದ್ದಾರೆ ಇವರಿಗ್ಯಾಕೆ ಕೊಟ್ಟಿಲ್ಲ, ಏನಿದರ ಅರ್ಥ(?) ಎಂದು ಪ್ರಶ್ನೆ ಮಾಡಿದ್ದಾರೆ.

ಏಳು ಜನರನ್ನ ಸಚಿವರನ್ನಾಗಿ ಮಾಡ್ತಾರೆ ಎನ್ನುವ ಖಾತರಿ ಈಗಲು ಇಲ್ಲ. ಯಡಿಯೂರಪ್ಪ ಮತ್ತು ಅವರ ದುಡ್ಡು ಇಲ್ಲದೆ ಯಾವುದೇ ಫೈಲ್​ ಕ್ಲೀಯರ್​ ಮಾಡಲ್ಲ. ಅಧಿಕಾರಿಗಳು ದುಡ್ಡು ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಏಳು ಕೋಟಿ ನಲವತ್ತು ಲಕ್ಷವನ್ನ ಆರ್​ಟಿಜಿಎಸ್​ ಮೂಲಕ ತೆಗೆದುಕೊಂಡಿದ್ದಾರೆ. ಅಕೌಂಟ್ ನಂಬರ್, ಅದು ಯಾರದ್ದು ಎನ್ನುವುದನ್ನು ಹೇಳಿದ್ದೇನೆ ಎಂದರು.

ನಮ್ಮ ಸರಕಾರದಲ್ಲಿ ಹಗರಣಗಳು ಇರಲಿಲ್ಲ. ನನಗಿರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಬದಲಾದ್ರೆ ಮತ್ತೊಬ್ಬರು ಸಿಎಂ ಆಗಬಹುದು. ಬಿಜೆಪಿಯವರು ಸರಕಾರ ಬೀಳಿಸಿಕೊಳ್ಳಲು ಹೋಗಲ್ಲ. ದುಡ್ಡು ಕೊಟ್ಟು ಶಾಸಕರನ್ನ ಖರೀದಿ ಮಾಡಿ ಸರಕಾರ ರಚನೆ ಮಾಡಿದ್ದಾರೆ, ಆಪರೇಷನ್ ಕಮಲ ಮಾಡಿ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸರಕಾರ ಮಾಡಿದ್ದಾರೆ ಎಂದು ಹೇಳಿದರು.

ಜನವರಿ 20ಕ್ಕೆ ರಾಜಭವನ ಮುತ್ತಿಗೆ ಹಾಕ್ತಿವಿ. ರೈತ ಚಳುವಳಿ ಬೆಂಬಲಿಸಿ ರಾಜಭವನ ಚಲೋ. ಸಿಹಿ ಸುದ್ದಿ ಕೊಡ್ತೀನಿ ಅಂತಾ ದೆಹಲಿಯಲ್ಲಿ ಹೇಳಿದರು. ಮಂತ್ರಿ ಮಂಡಲ ಮಾಡ್ತೀನಿ ಅಂತಾ ಯಡಿಯೂರಪ್ಪನವರು ಎಲ್ಲಿಯೂ ಹೇಳಿಲ್ಲ. ಯಡಿಯೂರಪ್ಪ ದಂದ್ವ ಹೇಳಿಕೆ ಯಾಕೆ ಕೊಡುತ್ತಿದ್ದಾರೆ ಎನ್ನುವುದನ್ನ ಅವರೇ ಹೇಳಬೇಕು ಎಂದಿದ್ದಾರೆ.

ಸದ್ಯ ನರೇಂದ್ರ ಮೋದಿವರು ಹೇಳೋದೊಂದು ಮಾಡೋದೊಂದು. ಮೋದಿಯವರದ್ದು ದ್ವಂದ್ವ ನಿಲುವು, ಅಚ್ಚೆ ದಿನ್​ ಆಯೆಗಾ ಅಂದರು ಅಚ್ಚೆ ದಿನ್ ಬಂದಿದೆನಾ(?) ಸಬಕಾ ಸಾಥ್ ಸಬಕಾ ವಿಕಾಸ್ ಅಂದರು ವಿಕಾಸ್ ಆಯ್ತಾ(?) ನಾ ಕಾವುಂಗಾ ನಾ ಕಾಯೆದುಂಗಾ ಅಂತಾ ಮೋದಿ ಹೇಳ್ತಾರೆ. ಆದರೆ, ಕರ್ನಾಟಕದಲ್ಲಿ ನಡೆಯುತ್ತಿರೋದೇನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯನ್ನು ಟೀಕಿಸಿದರು.

Next Story

RELATED STORIES