Top

ಸೋಷಿಯಲ್​ ಮೀಡಿಯಾ ವ್ಯಾಕ್ಸಿನ್​ ದೋಖಾ

ಧಾರವಾಡ ಜಿಲ್ಲೆಯಲ್ಲಿ ಫೇಸ್‌ಬುಕ್​ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ದೋಚುತ್ತಿರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.

ಸೋಷಿಯಲ್​ ಮೀಡಿಯಾ ವ್ಯಾಕ್ಸಿನ್​ ದೋಖಾ
X

ಹುಬ್ಬಳ್ಳಿ: ನಿಮ್ಮ ಮೊಬೈಲ್​ಗೆ ಇದ್ದಕ್ಕಿದ್ದಂತೆ ಮೆಸೇಜ್ ಬರುತ್ತೆ. ಈ ಮೆಸೇಜ್​ ನಂಬಿ ಅದೆಷ್ಟೋ ಜನ ರೊಕ್ಕ ಕಳೆದುಕೊಂಡು ಪರಿತಪಿಸುತ್ತಿದ್ದು, ಆ ನಗರದಲ್ಲಿ ಗೆಳೆಯರು, ಪರಿಚಿತರ ಹೆಸರಿನಲ್ಲಿ ನಕಲು ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟು ಜನರನ್ನ ವಂಚನೆ ಮಾಡುತ್ತಿದ್ದಾರೆ.

ಉತ್ತರ ಕರ್ನಾಟಕದ ಬಹುದೊಡ್ಡ ವಾಣಿಜ್ಯ ಕೇಂದ್ರ, ಈ ಭಾಗದ ಪ್ರಮುಖ ನಗರಿ ಎನಿಸಿಕೊಂಡಿರುವ ಹುಬ್ಬಳ್ಳಿಯಲ್ಲಿ ಸೋಶಿಯಲ್ ಮಿಡಿಯಾ ಬಳಸಿಕೊಂಡು ವಂಚನೆ ಮಾಡುವ ಜಾಲ ಫುಲ್ ಆ್ಯಕ್ಟಿವ್. ಮೊದಲೇ ಹೇಳಿ ಕೇಳಿ ಚೋಟಾ ಮುಂಬೈ‌ ಅಂತಾನೆ ಹೆಸರುವಾಸಿಯಾಗಿರುವ ಹುಬ್ಬಳ್ಳಿಯಲ್ಲಿ ಕಳ್ಳತನ, ಚೀಟಿಂಗ್, ದರೋಡೆ ಪ್ರಕರಣಗಳಿಗೇನು ಕಡಿಮೆಯಿಲ್ಲ. ಆದರೆ, ಇತ್ತಿನ ದಿನಗಳಲ್ಲಿ, ಹೈಟೆಕ್ ವಂಚನೆ ಪ್ರಕರಣಗಳಲ್ಲಿ ವಾಣಿಜ್ಯ ನಗರಿ ಮುಂಚೂಣಿಯಲ್ಲಿದೆ. ಫೇಸ್​ಬುಕ್​ನಲ್ಲಿನ ಪ್ರೊಫೈಲ್ ಫೋಟೋ ಬಳಸಿಕೊಳ್ಳುವ ಖದೀಮರು ಹಣಕ್ಕಾಗಿ ಬೇಡಿಕೆ ಇಡುವ ಪ್ರಕರಣಗಳು ನಿತ್ಯ ನಡೆಯುತ್ತಿವೆ.

ಧಾರವಾಡ ಜಿಲ್ಲೆಯಲ್ಲಿ ಫೇಸ್‌ಬುಕ್​ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ದೋಚುತ್ತಿರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಸೈಬರ್ ಖದೀಮರ ಜಾಲದೊಳಗೆ ಸಿಲುಕಿದ ಅಮಾಯಕರು ವಂಚನೆಗೊಳಗಾಗಿ ಲಕ್ಷಾಂತರ ಹಣ ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಾದ್ಯಂತ ಫೇಸ್‌ಬುಕ್ ಮೂಲಕ ಗೆಳೆಯರನ್ನು ಸಾಲ ಕೇಳುವವರ ಸಂಖ್ಯೆ ಜಾಸ್ತಿಯಾಗಿದ್ದು, ಕಷ್ಟದಲ್ಲಿದ್ದೇನೆ ಎಂದು ಹೇಳಿಕೊಂಡು ಫೋನ್ ಫೇ, ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡು ಲಕ್ಷಾಂತರ ರೂಪಾಯಿ ಚೀಟಿಂಗ್ ಮಾಡುತ್ತಿದ್ದಾರೆ. ಹೀಗೆ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಪೊಲೀಸರಿಗೂ ತಲೆ ನೋವು ತಂದಿದೆ. ವಂಚನೆಗೊಳಗಾದವರ ನಿಖರ ಸಂಖ್ಯೆ ತಿಳಿಯದಿದ್ದರೂ ಅಂದಾಜಿನ ಪ್ರಕಾರ ಧಾರವಾಡ ಜಿಲ್ಲೆಯೊಂದರಲ್ಲಿಯೇ 15 ಸಾವಿರಕ್ಕೂ ಹೆಚ್ಚು ಜನರು ಮೋಸದ ಜಾಲಕ್ಕೆ ಈವರೆಗೆ ಹಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರೊಫೈಲ್ ಫೋಟೋ ಬಳಸಿಕೊಂಡು ಫೇಸ್‌ಬುಕ್​ನಲ್ಲಿ ನಕಲಿ ಖಾತೆ ಸೃಷ್ಟಿಸುವ ಖದೀಮರು ನಕಲಿ ಖಾತೆ ಮೂಲಕ ಗೆಳೆಯರಿಗೆಲ್ಲಾ ರಿಕ್ವೆಸ್ಟ್ ಕಳುಹಿಸಿ ಮತ್ತೆ ಸ್ನೇಹಿತರಾಗಿ ಮೆಸೆಂಜರ್ ಮೂಲಕ ಹಣದ ಅವಶ್ಯಕತೆ ಇರುವ ಕುರಿತು ಮನವಿ ಮಾಡಿಕೊಳ್ಳುತ್ತಾರೆ. ಗೆಳೆಯ ಕಷ್ಟದಲ್ಲಿದ್ದಾನೆ ಎಂದು ನೆರವಿಗೆ ಮುಂದಾಗುವ ಸ್ನೇಹಿತರು ವಂಚನೆಗೆ ಬಲಿಯಾಗುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ನಕಲಿ ಖಾತೆಗಳ ಮೂಲಕ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ವಂಚಕರು ಕೆಲವರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿಕೊಂಡು ಅಂತಹವರ ಖಾತೆಗೆ ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದಾರೆ. ಫೇಸ್​ಬುಕ್​ನಲ್ಲಿನ ಅತಿ ಆತ್ಮೀಯ ಸ್ನೇಹಿತರನ್ನು ಟಾರ್ಗೆಟ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಾರೆ. ವಂಚನೆಗೊಳಗಾದ ಬಹುತೇಕರು ದೂರು ನೀಡುವುದಿಲ್ಲ. ಕೆಲವರು ಮಾತ್ರ ದೂರು ಸಲ್ಲಿಕೆ ಮಾಡುತ್ತಾರೆ. ಫೇಸ್‌ಬುಕ್‌ನಲ್ಲಿ ಲಿಂಕ್ ಕ್ಲಿಕ್ ಮಾಡುವಾಗ ಹುಷಾರಾಗಿರಬೇಕು. ಯಾವ ಲಿಂಕ್‌ನಲ್ಲಿ ಏನೇನು ಅಡಗಿದೆಯೋ ಎಂಬುದು ಗೊತ್ತಾಗುವುದಿಲ್ಲ. ಕೆಲವೊಂದು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆಯೂ ಹೆಚ್ಚಾಗಿದ್ದು ಜನರಲ್ಲಿಯು ಜಾಗೃತಿ ಮೂಡಿಸುವುದರ ಜೊತೆಗೆ ಪ್ರಕರಣಗಳನ್ನ ಬೇದಿಸುತ್ತಿದ್ದೆವೆ ಎನ್ನುತ್ತಾರೆ ಪೊಲೀಸರು.

ರಾಜಕಾರಣಿಗಳುವಿಐಪಿ ಹಾಗೂ ಉದ್ಯಮಿಗಳ‌ ಫೋಟೋ ಬಳಸಿಕೊಂಡು ನಕಲಿ ಪೇಸ್​​ಬುಕ್ ಸೃಷ್ಟಿಸಿ ಹಣ ವಂಚನೆ ಮಾಡುತ್ತಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್ ಅವರಿಗೂ ಇಂತ ಮೇಸೆಜ್ ಗಳು ಬಂದಿವೆ. ಇಂತ ಪ್ರಕರಣಗಳ ಕುರಿತು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆದರೂ ವಂಚನೆ ತಡೆಗಟ್ಟಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ.

Next Story

RELATED STORIES