Top

ಹುಬ್ಬಳ್ಳಿ ಕಿಮ್ಸ್​​ ಆಸ್ಪತ್ರೆಯಲ್ಲಿ ಹೃದಯ ರೋಗ ತಜ್ಞ ಕೊರತೆ

ದೇಹಕ್ಕೆ ಹೃದಯ ಎಷ್ಟು ಮುಖ್ಯವಾದ ಅಂಗವೋ. ಉತ್ತರ ಕರ್ನಾಟಕ ಭಾಗದ ಜನರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅಷ್ಟೇ ಮುಖ್ಯ.

ಹುಬ್ಬಳ್ಳಿ ಕಿಮ್ಸ್​​ ಆಸ್ಪತ್ರೆಯಲ್ಲಿ ಹೃದಯ ರೋಗ ತಜ್ಞ ಕೊರತೆ
X

ಹುಬ್ಬಳ್ಳಿ ಕಿಮ್ಸ್​​ ಆಸ್ಪತ್ರೆ

ಹುಬ್ಬಳ್ಳಿ: ಅದು ದಿನಕ್ಕೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಧನ್ವಂತರಿ. ಈ ಆಸ್ಪತ್ರೆಗೆ ಬರುವ ಅದೆಷ್ಟೋ ಬಡ ರೋಗಿಗಳು ಬಹುದೊಡ್ಡ ಆಶಾಭಾವನೆ ಇಟ್ಟುಕೊಂಡು ಬರ್ತಾರೆ. ಆದರೆ, ಅಂತಹ ಜನಪ್ರಿಯ ಆಸ್ಪತ್ರೆಯಲ್ಲಿಗ ವೈದ್ಯರ ಸಮಸ್ಯೆ ಕಾಡುತ್ತಿದೆ.

ದೇಹಕ್ಕೆ ಹೃದಯ ಎಷ್ಟು ಮುಖ್ಯವಾದ ಅಂಗವೋ. ಉತ್ತರ ಕರ್ನಾಟಕ ಭಾಗದ ಜನರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅಷ್ಟೇ ಮುಖ್ಯ. ದಿನಕ್ಕೆ ಸಾವಿರಾರು ಜನರಿಗೆ ಚಿಕಿತ್ಸೆ ನೀಡುವ ಕಿಮ್ಸ್ ಆಸ್ಪತ್ರೆಯಲ್ಲಿ ಈಗ ಹೃದಯ ಚಿಕಿತ್ಸೆಗೆ ಪೂರಕ ಸೌಲಭ್ಯದಿಂದ ವಂಚಿತವಾಗಿದೆ. ಹೃದಯ ಚಿಕಿತ್ಸೆಗೆ ಕೇವಲ ಒಬ್ಬರೇ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಹೃದಯ ಚಿಕಿತ್ಸೆಗೆ ಬರುವ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಂದು ವಿಶ್ವ ಹೃದಯ ದಿನ.

ಅಲ್ಲದೇ ಅದೆಷ್ಟೋ ಹೃದಯ ಚಿಕಿತ್ಸೆ ಆಸ್ಪತ್ರೆಗಳು ತಮ್ಮ ತಮ್ಮ ಸೌಲಭ್ಯಗಳ ಕುರಿತು ಹೇಳಿಕೊಳ್ಳುತ್ತಿವೆ. ಆದರೆ, ಉತ್ತರ ಕರ್ನಾಟಕದ ಸಂಜೀವಿನಿಗೆ ಮಾತ್ರ ಹೃದಯ ಚಿಕಿತ್ಸೆಗೆ ಪೂರಕವಾದ ವೈದ್ಯರ ಸೌಲಭ್ಯ ಮಾತ್ರ ಇಲ್ಲವಾಗಿದೆ. ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಹೃದಯ ಚಿಕಿತ್ಸೆಗೆ ಯಾವುದೇ ವೈದ್ಯರು ನೇಮಕವಾಗದೇ ಇರುವುದರಿಂದ ಕೇವಲ ಒಬ್ಬ ವೈದ್ಯರು ಮಾತ್ರ ಚಿಕಿತ್ಸೆ ನೀಡುತ್ತಿದ್ದಾರೆ.

ಪ್ರತಿದಿನ 1000-1500 ಜನ ಭೇಟಿ ನೀಡುವ ಕಿಮ್ಸ್ ಆಸ್ಪತ್ರೆಯಲ್ಲಿ ಹೃದಯ ತಜ್ಞರು ಹಾಗೂ ವೈದ್ಯರೇ ಇಲ್ಲದಿರುವುದು ವಿಪರ್ಯಾಸವೇ ಸರಿ. ಹತ್ತು ಹಲವಾರು ವಿಭಾಗದಲ್ಲಿ ಕೂಡ ಉತ್ತಮ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿರುವ ಕಿಮ್ಸ್ ಕೋವಿಡ್ ವಿರುದ್ಧ ಕೂಡ ಸೆಣಸಾಟದಲ್ಲಿ ಯಶಸ್ವಿ ಪ್ರಯತ್ನದ ಮೂಲಕ ಸಾವಿರಾರು ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದೆ. ಆದರೆ, ಹೃದಯ ಚಿಕಿತ್ಸೆಗೆ ಮಾತ್ರ ಸೂಕ್ತ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ಇನ್ನೂ ಈ ಸಂಬಂಧಿಸಿದಂತೆ ಕಿಮ್ಸ್ ನಿರ್ದೇಶಕರನ್ನ ಕೇಳಿದರೆ ವೈದ್ಯರ ಕೊರತೆ ಇದೆ. ಆದಷ್ಟು ಬೇಗ ನೇಮಕ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಸರ್ಕಾರದ ಆಸ್ಪತ್ರೆಯಲ್ಲಿಯೇ ಇಂತಹದೊಂದು ಅವ್ಯವಸ್ಥೆ ಸಾರ್ವಜನಿಕರ ಆಶಾಭಾವನೆಗೆ ತಣ್ಣೀರು ಎರಚಿದಂತಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ವೈದ್ಯರನ್ನ ನೇಮಕ ಮಾಡಿ ಬಡ ರೋಗಿಗಳ ಹಿತ ಕಾಪಾಡಲು ಮುಂದಾಗಬೇಕಿದೆ.

Next Story

RELATED STORIES