Top

ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ನಾಲ್ವರು ಅರೆಸ್ಟ್​

ಕಿರಾಣಿ ಅಂಗಡಿಯನ್ನು ಬಂದ್ ಮಾಡಲು ಹೋದ ಪೊಲೀಸ್ ಮೇಲೆ ಹಲ್ಲೆ

ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ನಾಲ್ವರು ಅರೆಸ್ಟ್​
X

ಹುಬ್ಬಳ್ಳಿ: ಪೊಲೀಸ್​ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕಿರಾಣಿ ಅಂಗಡಿ ಮಾಲೀಕ ಈರಣ್ಣ ಹನುಮಸಾಗರ ಮತ್ತು ಆತನ ಮೂವರು ಮಕ್ಕಳು ಬಂಧಿತ ಆರೋಪಿಗಳು. ಅಗತ್ಯ ವಸ್ತುಗಳ ಖರೀದಿಗೆ ಸಮಯ ಮುಗಿದ ಬಳಿಕ ಕಿರಾಣಿ ಅಂಗಡಿಯನ್ನು ಬಂದ್ ಮಾಡಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Next Story

RELATED STORIES