Top

ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ರೌಡಿಶೀಟರ್

ಹುಬ್ಬಳ್ಳಿಯ ಅಯೋಧ್ಯಾ ಹೋಟೆಲ್‌ನಲ್ಲಿ ಘಟನೆ

ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ರೌಡಿಶೀಟರ್
X

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್​ವೊಬ್ಬ ಹೋಟೆಲ್​ ಮ್ಯಾನೇಜರ್​ಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಹುಬ್ಬಳ್ಳಿಯ ಅಯೋಧ್ಯಾ ಹೋಟೆಲ್‌ನಲ್ಲಿ ನಡೆದಿದೆ. ಕಳೆದ ಮೂರು ದಿನದ ಹಿಂದೆ ನಡೆದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರೌಡಿಶೀಟರ್​ ಕಲ್ಲಪ್ಪ ಶಿರಕೋಳ ತನ್ನ ಸಹಚರರೊಂದಿಗೆ ಹಳೇ ಬಸ್ ನಿಲ್ದಾಣದ ಮುಂದಿರುವ ಅಯೋಧ್ಯಾ ಹೋಟೆಲ್​ಗೆ ಬಂದು ಚಹಾ ಆರ್ಡರ್​ ಮಾಡಿದ್ದ. ಬೇರೆ ಗ್ರಾಹಕರು ಇರುವ ಹಿನ್ನೆಲೆಯಲ್ಲಿ ಈತನಿಗೆ ಚಹ ಕೊಡುವುದು ತಡವಾಗಿದೆ. ಇದೇ ವಿಚಾರಕ್ಕೆ ಗಲಾಟೆ ತೆಗೆದ ಕಲ್ಲಪ್ಪ ಮ್ಯಾನೇಜರ್​ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ಬಳಿಕ ಏಕಾಏಕಿ ಮ್ಯಾನೇಜರ್​ಗೆ ಥಳಿಸಿದ್ದಾನೆ.

ಈ ಘಟನೆ ಹೋಟೇಲ್​ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


Next Story

RELATED STORIES