Top

ಕೊರೊನಾ ಹೆಚ್ಚಳ: ರೈಲ್ವೆ ಕೋಚ್​ಗಳು ಮತ್ತೆ ಚಿಕಿತ್ಸಾ ಕೇಂದ್ರಗಳಾಗಿ ಬದಲು

280 ಕೋಚ್​​ಗಳನ್ನು ಚಿಕಿತ್ಸೆಗೆ ಮುಕ್ತವಾಗಿಸಲು ರೈಲ್ವೆ ಇಲಾಖೆ ತಯಾರಿ

ಕೊರೊನಾ ಹೆಚ್ಚಳ:  ರೈಲ್ವೆ ಕೋಚ್​ಗಳು ಮತ್ತೆ ಚಿಕಿತ್ಸಾ ಕೇಂದ್ರಗಳಾಗಿ ಬದಲು
X

ಹುಬ್ಬಳ್ಳಿ: ದೇಶದಾದ್ಯಂತ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹರಸಾಹಸ ಪಡುತ್ತಿವೆ. ಹೀಗಾಗಿ ಕೇಂದ್ರ ರೈಲ್ವೆ ಇಲಾಖೆಯೂ ಸಹ ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸಿದ್ದು, ರೈಲ್ವೆ ಬೋಗಿಗಳನ್ನು ಮತ್ತೆ ಐಸೋಲೇಶನ್​ ವಾರ್ಡ್​ಗಳಾಗಿ ಪರಿವರ್ತನೆ ಮಾಡಲು ನಿರ್ಧರಿಸಿದೆ.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಹಾಗೂ ದೇಶದಲ್ಲಿನ ಆಸ್ಪತ್ರೆಗಳಲ್ಲಿ ಐಸೋಲೇಶನ್ ವಾರ್ಡ್​ಗಳ ಕೊರತೆಯನ್ನು ನೀಗಿಸಲು ರೈಲ್ವೆ ಕೋಚ್​ಗಳನ್ನ ಐಸೋಲೇಶನ್ ವಾರ್ಡ್​ಗಳನ್ನಾಗಿ ಪರಿವರ್ತನೆ ಮಾಡಲು ಸೌಥ್ ವೆಸ್ಟರ್ನ್ ರೈಲ್ವೆ ಸನ್ನದ್ಧವಾಗಿದೆ.

ಈ ಹಿಂದೆ ಹುಬ್ಬಳ್ಳಿಯ ರೈಲ್ವೆ ವರ್ಕ್ ಶಾಪ್​ನ 96 ಕೋಚ್​ಗಳು ಸೇರಿದಂತೆ ಇಲಾಖೆಯ ವ್ಯಾಪ್ತಿಯಲ್ಲಿ 312 ಕೋಚ್​ಗಳನ್ನ ವಾರ್ಡ್​ಗಳನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಆದರೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಾಣದ ಹಿನ್ನೆಲೆಯಲ್ಲಿ ಯಾವುದೇ ಐಸೋಲೇಷನ್‌ ಕೋಚ್ ಚಿಕಿತ್ಸೆಗೆ ಬಳಕೆಯಾಗಿರಲಿಲ್ಲ. ಅದೇ ರೀತಿ ಇದೀಗ ಮತ್ತೆ 280 ಕೋಚ್​​ಗಳನ್ನ ಚಿಕಿತ್ಸೆಗೆ ಮುಕ್ತವಾಗಿಸಲು ರೈಲ್ವೆ ಇಲಾಖೆ ತಯಾರಿ ನಡೆಸುತ್ತಿದೆ.

Next Story

RELATED STORIES