Top

ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಪುನರಾರಂಭ

ಮೂವರು ಸೋಂಕಿತರಿಗೆ ಯಶಸ್ವಿ ಚಿಕಿತ್ಸೆ

ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಪುನರಾರಂಭ
X

ಹುಬ್ಬಳ್ಳಿ: ಕಳೆದ ವರ್ಷ ಕೊರೊನಾ ಹೊಡೆತಕ್ಕೆ ವಿಶ್ವವೇ ತತ್ತರಿಸಿ ಹೋಗಿತ್ತು. ಈ ಸಂಧರ್ಭಧಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಯಶಸ್ವಿಯಾಗಿ ಚಿಕಿತ್ಸೆ ನಡೆಸಲಾಗಿತ್ತು. ಇದೀಗ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಕಿಮ್ಸ್​ ಆಸ್ಪತ್ರೆಯಲ್ಲಿ ಮತ್ತೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭಿಸಲಾಗಿದೆ.

ಪ್ಲಾಸ್ಮಾ ಥೆರಪಿ ಒಂದು ಹಂತದಲ್ಲಿ ಕೊರೊನಾ ಸೋಂಕಿತರಿಗೆ ಜೀವರಕ್ಷಕ ಅಂತಲೇ ಹೇಳಬಹುದು. ಮೊದಲ ಅಲೆಯಲ್ಲಿ ಸಾಕಷ್ಟು ಸೋಂಕಿತರು ಪ್ಲಾಸ್ಮಾ ಥೆರಪಿಯಿಂದ ಬದುಕಿ ಬಂದಿರೋ ನಿದರ್ಶನಗಳಿವೆ. ಇದೀಗ 2ನೇ ಅಲೆ ಅಬ್ಬರಿಸುತ್ತಿದ್ದು, ಮತ್ತೆ ಪ್ಲಾಸ್ಮಾ ಥೆರಪಿ ಚಾಲ್ತಿಗೆ ಬಂದಿದೆ.

ಕಿಮ್ಸ್‌ನಲ್ಲಿ ಸ್ಥಗಿತಗೊಂಡಿದ್ದ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಇದೀಗ ಪುನಾರಾಂಭವಾಗಿದೆ. ಈಗಾಗಲೇ ಮೂವರು ಸೋಂಕಿತರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ.

ಕಳೆದ ಮೇ ತಿಂಗಳಲ್ಲಿ ಕಿಮ್ಸ್​ ಪ್ಲಾಸ್ಮಾ ಚಿಕಿತ್ಸೆ ನೀಡಲು ಐಸಿಎಂಆರ್‌ ಒಪ್ಪಿಗೆ ಪಡೆದುಕೊಂಡಿತು. ಬಳಿಕ ಸೋಂಕಿಂದ ಗುಣಮುಖರಾಗದ್ದ 64 ವರ್ಷದ ವೃದ್ಧರೊಬ್ಬರ ಮನವೊಲಿಸಿ ಪ್ಲಾಸ್ಮಾ ಪಡೆದು, ಮತ್ತೋರ್ವ 65 ವರ್ಷದ ಸೋಂಕಿತನಿಗೆ ಚಿಕಿತ್ಸೆ ನೀಡಲಾಗಿತ್ತು. ಡಿಸೆಂಬರ್‌ ವೇಳೆಗೆ 108 ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಸೋಂಕು ಇಳಿಮುಖವಾಗುತ್ತಾ ಸಾಗಿದಂತೆ ಫೆಬ್ರವರಿ ವೇಳೆಗೆ ಪ್ಲಾಸ್ಮಾ ಥೆರಪಿ ಬಹುತೇಕ ಸ್ಥಗಿತಗೊಂಡಿತ್ತು. ಈಗ ಎರಡನೇ ಅಲೆ‌ ಶುರುವಾಗಿದ್ದು, ಮತ್ತೆ ಆರಂಭಿಸಲಾಗಿದೆ.

ಆಸ್ಪತ್ರೆಯಲ್ಲಿ 200ಮಿ.ಲೀನ 12 ಬಾಟಲ್‌ ಹಾಗೂ 100 ಮಿ.ಲೀಟರ್​ನ 1 ಬಾಟಲ್‌ ಪ್ಲಾಸ್ಮಾ ಸಂಗ್ರಹಿಆಸ್ಪತ್ರೆಯಲ್ಲಿ 200ಮಿ.ಲೀನ 12 ಬಾಟಲ್‌ ಹಾಗೂ 100 ಮಿ.ಲೀಟರ್​ನ 1 ಬಾಟಲ್‌ ಪ್ಲಾಸ್ಮಾ ಸಂಗ್ರಹಿಸಿಡಲಾಗಿದೆ.

ಕಿಮ್ಸ್‌ನಲ್ಲಿ ಕನಿಷ್ಠ 8ಕ್ಕೆ ಇಳಿದಿದ್ದ ಸೋಂಕಿತರ ಸಂಖ್ಯೆ ಇದೀಗ ಎರಡನೇ ಅಲೆ ಅಬ್ಬರದಿಂದ 100ಕ್ಕೂ ಹೆಚ್ಚಾಗಿದೆ . ಸಂಗ್ರಹವಿರುವ ಪ್ಲಾಸ್ಮಾ ಸದ್ಯಕ್ಕೆ ಬಳಕೆಯಾಗುತ್ತಿದೆ.

ರಾಜ್ಯದಲ್ಲಿ ಮೊದಲಿಗೆ ಪ್ಲಾಸ್ಮಾ ದಾನ ಮಾಡಲು ಕೊರೊನಾದಿಂದ ಗುಣಮುಖರಾದವರು ಹಿಂದೇಟು ಹಾಕ್ತಿದ್ರು. ಈಗ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದ್ದು, ಪ್ಲಾಸ್ಮಾ ನೀಡಲು ತಾವಾಗಿಯೇ ಮುಂದೆ ಬರುತ್ತಿದ್ದಾರೆ ಎನ್ನುವುದು ಸಮಧಾನಕರವಾದ ಸಂಗತಿ.

Next Story

RELATED STORIES