Top

ನೀರು, ಆಹಾರವಿಲ್ಲದೇ 3 ರಾತ್ರಿ ದಟ್ಟಾರಣ್ಯದಲ್ಲಿ ಕಳೆದ ಶತಾಯುಷಿ

ಧಾರವಾಡದಲ್ಲೊಂದು ಪವಾಡ ಸದೃಶ್ಯ ಘಟನೆ

ನೀರು, ಆಹಾರವಿಲ್ಲದೇ 3 ರಾತ್ರಿ ದಟ್ಟಾರಣ್ಯದಲ್ಲಿ ಕಳೆದ ಶತಾಯುಷಿ
X

ಹುಬ್ಬಳ್ಳಿ: ದಟ್ಟಾರಣ್ಯದಲ್ಲಿ ನೂರು ವರ್ಷದ ವೃದ್ಧರೊಬ್ಬರು ಆಹಾರವಿಲ್ಲದೇ ಮೂರು ರಾತ್ರಿ ಬದುಕಿರುವ ಪವಾಡ ಸದೃಶ್ಯ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯ ಬೈಚವಾಡ ಗ್ರಾಮದಲ್ಲಿ ನಡೆದಿದೆ.

ಕಲಘಟಗಿ ತಾಲೂಕಿನ ಬೈಚವಾಡಯ ಜನ್ನು ಮಾಂಬು ಪಾಂಡ್ರಮೀಸೆ ಎಂಬ 114 ವರ್ಷ ವಯಸ್ಸಿನ ವೃದ್ಧರೊಬ್ಬರು, ಹೊಲಕ್ಕೆ ಹೋಗುವುದಾಗಿ ಹೇಳಿ‌ ಇದೇಜೂನ್​ 26ರ ಬೆಳಿಗ್ಗೆ ಮನೆಯಿಂದ ತೆರಳಿದ್ದರು. ನಂತರ ಪಕ್ಕದ ಬೈಚವಾಡದಲ್ಲಿನ ತನ್ನ ಮಗಳ‌ ಮನೆಗೆ ಹೋಗಿ ಅಲ್ಲಿ ಕೆಲ ಹೊತ್ತು ಉಳಿದು ಮರಳಿದ್ದರು.

ತನ್ನ ಸ್ವಗ್ರಾಮಕ್ಕರ ಮರಳುವಾಗ ಗೌಳಿದಡ್ಡಿಗೆ ದಟ್ಟ ಅರಣ್ಯದಲ್ಲಿ ಕಾಲು ದಾರಿಯಲ್ಲಿ ನಡೆದು ಬರುವಾಗ ವಯೋ ಸಹಜ ಮರವಿನಿಂದ ಅರಣ್ಯದಲ್ಲಿ ದಾರಿ ತಪ್ಪಿ ಅಲೆದಾಡಿದ್ದಾರೆ.

ಇತ್ತ ಜನ್ನು ಅವರು ಕಾರಣದ ಹಿನ್ನೆಲೆ ಗ್ರಾಮದ ಜನರು ವೃದ್ಧರ ಸಂಬಂಧಿಕರು, ಗ್ರಾಮದ ಹಿರಿಯರು, ಯುವಕರು ಅರಣ್ಯ ಇಲಾಖೆಯ ಸಿಬ್ಬಂದಿ ಹಲವಾರು ತಂಡಗಳನ್ನು ಮಾಡಿಕೊಂಡು ನಿರಂತರ ನಾಲ್ಕು ದಿನಗಳ ಕಾಲದ ಹುಡುಕಿದ್ದಾರೆ.


ನಾಪತ್ತೆಯಾಗಿದ್ದ ವೃದ್ಧ ಮೂರು ರಾತ್ರಿಗಳನ್ನು ಅರಣ್ಯದಲ್ಲಿ ಕಾಡು‌ ಪ್ರಾಣಿಗಳ‌ ಭಯದಲ್ಲಿಯೇ ನೋಣ, ಸೊಳ್ಳೆಗಳನ್ನು ಕಡಿಸಿಕೊಂಡು ಕಾಲ‌ ಕಳೆದಿದ್ದಾರೆ. ಈ ಸಮಯದಲ್ಲು ಅವರು ನಿದ್ದೆಯನ್ನು‌ ಸಹ ಮಾಡದೇ, ಆಹಾರವನ್ನು ಸೇವಿಸದೇ,ನೀರನ್ನು ಕುಡಿಯದೇ, ಯಾರಾದರು ಬರುತ್ತಾರೆ ಎಂಬ ವಿಶ್ವಾಸದಲ್ಲಿಯೇ ಕಾಲ‌ಕಳೆದಿದ್ದಾರೆ. ಕೊನೆಗೂ ಜನ್ನು ಹುಡುಕಾಟ ಕಾರ್ಯಾಚರಣೆ ಯಶಸ್ವಿಯಾಗಿದ್ದು ಇಂದು ಪತ್ತೆಯಾಗಿದ್ದಾರೆ.

ನೀರು, ಆಹಾರ ವಿಲ್ಲದೇ ಇದ್ದರು ಸಹ 114 ವೃದ್ಧ ಮೂರು ರಾತ್ರಿ ಅರಣ್ಯದಲ್ಲಿ ಕಳೆದಿದ್ದರು, ಅವರ ಆರೋಗ್ಯದಲ್ಲಿ ಯಾವುದೇ ಏರುಪೇರುಗಳು ಆಗದೇ ಆರೋಗ್ಯವಾಗಿರುವುದು ವಿಸ್ಮಯವೇ ಸರಿ.

Next Story

RELATED STORIES