Top

3 ತಿಂಗಳಿನಿಂದ ವೇತನ ಇಲ್ಲದೇ ಸ್ವಾಬ್​ ಸಂಗ್ರಹ ಸಿಬ್ಬಂದಿ ಕಂಗಾಲು

ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಸಿಬ್ಬಂದಿ ಕಷ್ಟ ಕೇಳುವಱರು..?

3 ತಿಂಗಳಿನಿಂದ ವೇತನ ಇಲ್ಲದೇ ಸ್ವಾಬ್​ ಸಂಗ್ರಹ ಸಿಬ್ಬಂದಿ ಕಂಗಾಲು
X

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮ ವಹಿಸುತ್ತಿರುವ ಸ್ವಾಬ್​ ಸಂಗ್ರಹ ಸಿಬ್ಬಂದಿ ಮೂರು ತಿಂಗಳಿನಿಂದ ವೇತನ ಬಾರದೇ ಕಂಗಲಾಗಿದ್ದಾರೆ.

ಧಾರವಾಡ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಸ್ವಾಬ್​​ ಟೆಸ್ಟ್​ಗಾಗಿ ಒಟ್ಟು 5 ಮೊಬೈಲ್ ವಾಹನಗಳ ನಿಯೋಜನೆ ಮಾಡಲಾಗಿದೆ. ಈ ಕೆಲಸಕ್ಕೆ ಪ್ಯಾರಾ ಮೆಡಿಕಲ್ ಓದಿರುವ 15 ಜನರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದ್ದು, ಪ್ರತಿ ತಿಂಗಳು ₹10 ಸಾವಿರ ವೇತನವನ್ನು ನಿಗದ ಮಾಡಲಾಗಿತ್ತು. ಈ ಪೈಕಿ ಕೆಲವರಿಗೆ 1 ತಿಂಗಳ ಸಂಬಳ ಸಿಕ್ಕಿದ್ದು, ಮತ್ತು ಬಹುತೇಕ ಸಿಬ್ಬಂದಿ ಮೂರು ತಿಂಗಳ ಸಂಬಳ ಸಿಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಸ್ವಾಬ್​ ಸಿಬ್ಬಂದಿಯ ಬಗ್ಗೆಯೂ ಗಮನ ಹರಿಸಬೇಕಿದ್ದು, ಸಮಯಕ್ಕೆ ಸರಿಯಾಗಿ ವೇತನ ದೊರಕಿಸುವ ವ್ಯವಸ್ಥೆ ಮಾಡಬೇಕಿದೆ.

Next Story

RELATED STORIES