Top

ವಿಭಿನ್ನ ಆಚರಣೆ: ಹೊಸ ಕಾರಿಗೆ ಸ್ಮಶಾನದಲ್ಲಿ ಪೂಜೆ

ವಿದ್ಯಾನಗರ ರುದ್ರಭೂಮಿಯಲ್ಲಿ ಹೊಸ ವಾಹನ ಪೂಜೆ

ವಿಭಿನ್ನ ಆಚರಣೆ: ಹೊಸ ಕಾರಿಗೆ ಸ್ಮಶಾನದಲ್ಲಿ ಪೂಜೆ
X

ಹುಬ್ಬಳ್ಳಿ: ಸಾಮಾನ್ಯವಾಗಿ ಜನರು ಹೊಸ ವಾಹನವನ್ನು ಖರೀದಿಸಿದಾಗ ದೇವಸ್ಥಾನ, ಮಠ, ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಆದರೆ ಹುಬ್ಬಳ್ಳಿಯ ಉಣಕಲ್​ನ ವ್ಯಕ್ತಿಯೊಬ್ಬರು ತಮ್ಮ ಹೊಸ ಕಾರಿಗೆ ಸ್ಮಶಾನದಲ್ಲಿ ಪೂಜೆ ಮಾಡಿಸಿದ್ದಾರೆ.

ಉಣಕಲ್ ಗ್ರಾಮದ ಕಲ್ಲಪ್ಪ ವಾಲಿಕಾರ ಎನ್ನುವವರು ವಿದ್ಯಾನಗರ ರುದ್ರಭೂಮಿಯಲ್ಲಿ ತಮ್ಮ ಹೊಸ ವಾಹನದ ಪೂಜೆ ನೆರವೇರಿಸಿದ್ದಾರೆ. ಅಲ್ಲದೇ ಆಹ್ವಾನಿತರಿಗೆ ಸಿಹಿ ಹಂಚಿದ್ದಾರೆ.

ಸ್ಮಶಾನದ ಬಗ್ಗೆ ಜನರಲ್ಲಿ ಕೀಳು ಭಾವನೆ ಇದೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದ ಸ್ಮಶಾನದಲ್ಲಿಯೇ ಗಾಡಿ ಪೂಜೆ ಮಾಡಿಸಿರುವುದಾಗಿ ಕಲ್ಲಪ್ಪ ವಾಲಿಕಾರ ಹೇಳಿದ್ದಾರೆ.





Next Story

RELATED STORIES