Top

ಹುಬ್ಬಳಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹೊಸ ತೆರಿಗೆಗೆ ಜನ ಕಂಗಾಲು

ಜೀವನ ನಿರ್ವಹಣೆಯೇ ಸದ್ಯದ ಸ್ಥಿತಿಯಲ್ಲಿ ಕಷ್ಟಕರವಾಗಿರುವಾಗ, ಆಸ್ತಿಕರ ಕಿರಿಕಿರಿ ಪ್ರಾರಂಭವಾಗುತ್ತಿದೆ.

ಹುಬ್ಬಳಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹೊಸ ತೆರಿಗೆಗೆ ಜನ ಕಂಗಾಲು
X

ಹುಬ್ಬಳ್ಳಿ: ಕೋವಿಡ್‌ನಿಂದ ಕಂಗಾಲಾದ ಜನರ ಮೇಲೆ ಇದೀಗ ಮತ್ತೊಂದು ಭಾರ ಹೋರಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹೊಸ ತೆರಿಗೆ ಗುಮ್ಮ ಸಾರ್ವಜನಿಕರಿಗೆ ಕಂಗಾಲಾಗುವಂತೆ ಮಾಡಿದೆ. ಜೀವನ ನಿರ್ವಹಣೆಯೇ ಸದ್ಯದ ಸ್ಥಿತಿಯಲ್ಲಿ ಕಷ್ಟಕರವಾಗಿರುವಾಗ, ಆಸ್ತಿಕರ ಕಿರಿಕಿರಿ ಪ್ರಾರಂಭವಾಗುತ್ತಿದೆ. ರೊಚ್ಚಿಗೆದ್ದಿರುವ ಅವಳಿನಗರದ ಮಂದಿ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡದ ಜನ ಮತ್ತೊಂದು ಸಂಕಷ್ಟದ ಸುಳಿಗೆ ಸಿಲುಕಿಕೊಳ್ಳುವಂತಾಗಿದೆ. ಕೋವಿಡ್‌ನಿಂದ ಜನ ಚೇತರಿಸಿಕೊಳ್ಳುವುದೇ ಕಷ್ಟವಾಗಿರುವಾಗ ಪಾಲಿಕೆ ಹೊಸ ರಾಗ ಶುರು ಮಾಡಿದೆ. ಅಭಿವೃದ್ಧಿಯ ಹೆಸರಿನಲ್ಲಿ ಆಸ್ತಿ ಕರದ ದರವನ್ನು ಹೆಚ್ಚಿಸಿದೆ. ಪಾಲಿಕೆ ಕಾಯ್ದೆಗೆ ಸರಕಾರ ತಿದ್ದುಪಡಿ ತಂದು ಕಾರ್ಪೋರೇಷನ್‌ಗಳಿಗೆ ಮಾರ್ಗಸೂಚಿಗಳನ್ನು ರವಾನಿಸಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಮಾತ್ರ ಆಸ್ತಿದರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೇ ಹೋದ ವರ್ಷ ಆಸ್ತಿಕರ ಹೆಚ್ಚಳ ಮಾಡಿದ್ದ ಪಾಲಿಕೆ ಈಗ ಮತ್ತೊಮ್ಮೆ ಅಸ್ತಿ ಕರವನ್ನು ಶೇ.20 ರಿಂದ 40ರಷ್ಟು ಏರಿಕೆ ಮಾಡಿದೆ. ಇದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಟ್ಯಾಕ್ಸ್ ಹೆಚ್ಚಿಸುವ ಉದ್ದೇಶವಿಲ್ಲಾ ಅಂತಾ ಹೇಳುತ್ತಿದ್ದರೂ, ಸರಕಾರದ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕಾಗುತ್ತೆ ಅಂತಾ ಮಾರ್ಮಿಕವಾಗಿ ಹೇಳುತ್ತಿದ್ದಾರೆ. ಆದರೆ, ಜನರು ಮಾತ್ರ ಕರ ಪರಿಷ್ಕರಣೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗ್ಯಾಸ್,ಪೆಟ್ರೋಲ್‌ ನಂತೆ ಮನೆ ಟ್ಯಾಕ್ಸ್‌ನ್ನು ಹೆಚ್ಚು ಮಾಡಿದರೇ, ಬಡವರು ಬದುಕುವುದಾದರೂ ಹೇಗೆ ಅಂತಾ ಸರಕಾರದ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.

ಕರ ಕಿರಿಕಿರಿ ಅವಳಿನಗರದ ಜನರಿಗೆ ಗುಮ್ಮನಂತೆ ಕಾಡುತ್ತಿದೆ. ಮೇಲ್ನೋಟಕ್ಕೆ ನಾವು ತೆರಿಗೆ ಬಗ್ಗೆ ಮಾತು ಆಡಲ್ಲಾ ಅಂತಾ ಹೇಳುವ ಪಾಲಿಕೆಯ ಅಧಿಕಾರಿಗಳು ಯಾವಾಗ ಸರಕಾರದ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರುತ್ತಿದ್ದಾರೆ ಅಂತಾ ಮಾತ್ರ ಗೊತ್ತಾಗುತ್ತಿಲ್ಲ.

Next Story

RELATED STORIES