Top

BSY ಪ್ರಬುದ್ಧ ರಾಜಕಾರಣಿಯಾಗಿ ಸಂದೇಶ ನೀಡಿದ್ದಾರೆ-ಮೂರು ಸಾವಿರ ಮಠ ಶ್ರೀಗಳ ಮೆಚ್ಚುಗೆ

ಮುತ್ಸದ್ದಿ ರಾಜಕಾರಣಿಗೆ ಇರೋ ಬದ್ಧತೆ ಯಡಿಯೂರಪ್ಪಗೆ ಇದೆ

BSY ಪ್ರಬುದ್ಧ ರಾಜಕಾರಣಿಯಾಗಿ ಸಂದೇಶ ನೀಡಿದ್ದಾರೆ-ಮೂರು ಸಾವಿರ ಮಠ ಶ್ರೀಗಳ ಮೆಚ್ಚುಗೆ
X

ಹುಬ್ಬಳ್ಳಿ: ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡ್ತೇನೆ ಎಂದು ಯಡಿಯೂರಪ್ಪ ಪ್ರಬುದ್ಧ ರಾಜಕಾರಣಿಯಾಗಿ ಏನು ಸಂದೇಶ ನೀಡಬೇಕು ಅದನ್ನು ನೀಡಿದ್ದಾರೆ ಎಂದು ಮೂರು ಸಾವಿರ ಮಠದ ಪೀಠಾಧಿಪತಿ ಶ್ರೀ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುತ್ಸದ್ದಿ ರಾಜಕಾರಣಿಗೆ ಇರೋ ಬದ್ಧತೆ ಯಡಿಯೂರಪ್ಪಗೆ ಇದೆ. ಡಿಯೂರಪ್ಪ ಹೇಳಿಕೆ ತುಂಬಾ ಬೆಲೆಯುಳ್ಳ ಮಾತು. ಅವರ ಮಾತಿನಿಂದ ರಾಜಕಾರಣಿ ಹೇಗಿರಬೇಕೆಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಯಡಿಯೂರಪ್ಪ ಒಬ್ಬ ಒಳ್ಳೆ ರಾಜಕಾರಣಿ. ಕರ್ನಾಟಕದ ಸೇವೆ ಮಾಡೋ ಸಜ್ಜನ ರಾಜಕಾರಣಿ ಎಂದು ಹೊಗಳಿದರು.

ಇನ್ನು ಸಹಿ ಸಂಗ್ರಹದಂತಹ ಚಟುವಟಿಕೆಗಳು ಎಲ್ಲ ಪಕ್ಷದಲ್ಲೂ ಇರುತ್ತದೆ. ಆದ್ರೆ ಕೊರೋನಾದಂತಹ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ನಡೆಯಬಾರದಿತ್ತು ಎಂದರು.

Next Story

RELATED STORIES