Top

ಕೋವಿಡ್​ ಕೇರ್​​ ಸೆಂಟರ್​​ನಲ್ಲಿ ಕಳ್ಳನ ಕೈಚಳಕ: ದುಬಾರಿ ಮೊಬೈಲ್ ಕದ್ದು ಎಸ್ಕೇಪ್​​

ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕೋವಿಡ್​ ಕೇರ್​​ ಸೆಂಟರ್​​ನಲ್ಲಿ ಕಳ್ಳನ ಕೈಚಳಕ: ದುಬಾರಿ ಮೊಬೈಲ್ ಕದ್ದು ಎಸ್ಕೇಪ್​​
X

ಧಾರಾವಾಡ: ಅಟೆಂಡರ್​​ ಸೋಗಿನಲ್ಲಿ ಬಂದ ಕಿಡಿಗೇಡಿಯೊಬ್ಬ ಕೋವಿಡ್​​ ಸೆಂಟರ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಮೊಬೈಲ್​ ಕದ್ದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಕಿಮ್ಸ್ ಆಸ್ಪತ್ರೆಯ ಕೋವಿಡ್ ಸೆಂಟರ್​ನಲ್ಲಿ ಹಗಲಿರುಳು ಕೊರೊನಾ ಸೋಂಕಿತರ ಶುಶ್ರೋಷೆಯಲ್ಲಿ ತೊಡಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿ ಅಟೆಂಡರ್​ನಂತೆ ಬಂದು, ಟೇಬಲ್​ನಲ್ಲಿದ್ದ ₹50 ಸಾವಿರ ಬೆಲೆ ಬಾಳುವ ಮೊಬೈಲ್​ ಕದ್ದು ಪರಾರಿಯಾಗಿದ್ದಾನೆ.

ಆರೋಪಿಯ ಸಂಪೂರ್ಣ ಚಲನವಲನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES