Top

ಮದುವೆಯಲ್ಲಿ 200 ಜನರಿಗೆ ಅವಕಾಶ ನೀಡಿ-ಕಲ್ಯಾಣ ಮಂಟಪ ಮಾಲೀಕರ ಮನವಿ

ಮಾನವೀಯತೆ ದೃಷ್ಟಿಯಿಂದ ಸರ್ಕಾರ ನಮ್ಮ ಮೇಲೆ ಕರುಣೆ ತೋರಿ

ಮದುವೆಯಲ್ಲಿ 200 ಜನರಿಗೆ ಅವಕಾಶ ನೀಡಿ-ಕಲ್ಯಾಣ ಮಂಟಪ ಮಾಲೀಕರ ಮನವಿ
X

ಹುಬ್ಬಳ್ಳಿ: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮದುವೆ ಸಮಾರಂಭಗಳಿಗೆ ಕೇವಲ 50 ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡಿರುವುದು ಸರಿಯಲ್ಲ. ಕಲ್ಯಾಣ ಮಂಟಪಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಕನಿಷ್ಠ 200 ಜನರಿಗೆ ಅವಕಾಶ ನೀಡಬೇಕೆಂದು ಎಂದು ಹುಬ್ಬಳ್ಳಿಯ ಕಲ್ಯಾಣ ಮಂಟಪದ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.

ಈ ಮೊದಲು 100 ಜನರಿಗೆ ಅವಕಾಶ ನೀಡುವುದಾಗಿ ಸರ್ಕಾರ ಹೇಳಿತ್ತು. ಇದೀಗ ಏಕಾಏಕಿ ಅದನ್ನು 50ಕ್ಕೆ ಇಳಿಸಿದೆ. ಇದರಿಂದ ಕಲ್ಯಾಣ ಮಂಟಪಗಳಿಗೆ ಜನರು ಬರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷವೂ ಯಾವುದೇ ಸಭೆ, ಸಮಾರಂಭ, ಮದುವೆ ಇಲ್ಲದೇ ದೊಡ್ಡ ನಷ್ಟ ಅನುಭವಿಸಿದ್ದೇವೆ. ಇದೀಗ ಸೀಸನ್ ಇದ್ದರೂ ಇಂತಹ ನಿಯಮಾವಳಿಗಳಿಂದ ಸಮಸ್ಯೆ ಎದುರಾಗಿದೆ. ನಿಯಮಗಳನ್ನು ಒಂದಿಷ್ಟು ಸಡಿಲಿಕೆಗೆ‌ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಾಲ- ಸೋಲ ಮಾಡಿ ಕಲ್ಯಣ ಮಂಟಪ ನಿರ್ಮಾಣ ಮಾಡಿರುತ್ತೇವೆ. ಸಾಲದ ಕಂತು ಕಟ್ಟಬೇಕು, ಈಗ ಕಲ್ಯಾಣ ಮಂಟಪ ಕಾಯ್ದಿರಿಸಿದವರೂ ರದ್ದು ಪಡಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ತಮಗೆ ಒಂದಿಷ್ಟಾದರೂ ಉಸಿರಾಡಲು ಅವಕಾಶ ಮಾಡಿಕೊಡಿ. ಮಾನವೀಯತೆ ದೃಷ್ಟಿಯಿಂದ ಸರ್ಕಾರ ನಮ್ಮ ಮೇಲೆ ಕರುಣೆ ತೋರಿ ಎಂದು ಅಳಲು ತೋಡಿಕೊಂಡಿದ್ದಾರೆ.

Next Story

RELATED STORIES