Top

ಕೋವಿಡ್​ಗೆ ಹೆದರಿ ಆಸ್ಪತ್ರೆಯಲ್ಲೇ ವೃದ್ಧ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಘಟನೆ

ಕೋವಿಡ್​ಗೆ ಹೆದರಿ ಆಸ್ಪತ್ರೆಯಲ್ಲೇ ವೃದ್ಧ ಆತ್ಮಹತ್ಯೆಗೆ ಶರಣು
X

ಹುಬ್ಬಳ್ಳಿ: ಕೋವಿಡ್‌ಗೆ ಹೆದರಿ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ನಡೆದಿದೆ.

ಹುಬ್ಬಳ್ಳಿಯ ರಣದಂಬ ಕಾಲೋನಿಯ ನಿವಾಸಿಯೊಬ್ಬರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಕಿಮ್ಸ್​ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಕೊರೊನಾ ಸೋಂಕಿಗೆ ಹೆದರಿದ ಅವರು, ಸಿಬ್ಬಂದಿ ಹಾಗೂ ಸಂಬಂಧಿಕರ ಕಣ್ಣಿಪ್ಪಿಸಿ ಮಧ್ಯರಾತ್ರಿ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಿಮ್ಸ್ ಕೋವಿಡ್​ ಸೆಂಟರ್​ನ ವಾರ್ಡ ನಂ 303ರಲ್ಲಿ ಘಟನೆ ನಡೆದಿದ್ದು, ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Next Story

RELATED STORIES