Top

ಮಾಸ್ಕ್​ ಧರಿಸದೇ ಅನಗತ್ಯ ಓಡಾಟ: ಪ್ರಶ್ನಿಸಿದ ಪೊಲೀಸ್​ ಮೇಲೆ ಯುವಕನಿಂದ ಹಲ್ಲೆ

ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಾಸ್ಕ್​ ಧರಿಸದೇ ಅನಗತ್ಯ ಓಡಾಟ: ಪ್ರಶ್ನಿಸಿದ ಪೊಲೀಸ್​ ಮೇಲೆ ಯುವಕನಿಂದ ಹಲ್ಲೆ
X

ಹುಬ್ಬಳ್ಳಿ: ಮಾಸ್ಕ್​ ಧರಿಸದೇ ಇರುವುದನ್ನು ಪ್ರಶ್ನಿಸಿದ ಪೊಲೀಸ್​ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ಹೊಸೂರು ಕ್ರಾಸ್ ಬಳಿ ನಡೆದಿದೆ.

ಉತ್ತರ ಪ್ರದೇಶದ ಗೋರಖಪುರ ಮೂಲದ ವೀರೇಂದ್ರ ಪ್ರಕಾಶ ಸಿಂಗ್ ಎನ್ನುವಾತ ಮಾಸ್ಕ್​ ಧರಿಸದೇ ಕಾರಿನಲ್ಲಿ ಲಿಂಗರಾಜನಗರ ಕಡೆಗೆ ಹೊರಟಿದ್ದು, ಈ ವೇಳೆ ಪೊಲೀಸರು ತಡೆದಿದ್ದಾರೆ. ಅನಗತ್ಯ ಓಡಾದ ಬಗ್ಗೆ ಪ್ರಶ್ನಿಸಿ ಮಾಸ್ಕ್​​ ಧರಿಸುವಂತೆ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಯುವಕ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಸ್ಥಳದಲ್ಲಿದ್ದ ಇತರ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES