Top

ಕಿಮ್ಸ್​ ಆಸ್ಪತ್ರೆಯಲ್ಲಿ ಧೂಳು ತಿನ್ನುತ್ತಿವೆ ಹತ್ತಾರು ಬೆಡ್​ಗಳು

ಕಿಮ್ಸ್​ ಆಸ್ಪತ್ರೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಿಮ್ಸ್​ ಆಸ್ಪತ್ರೆಯಲ್ಲಿ ಧೂಳು ತಿನ್ನುತ್ತಿವೆ ಹತ್ತಾರು ಬೆಡ್​ಗಳು
X

ಹುಬ್ಬಳ್ಳಿ: ಕೊರೊನಾ ಎರಡನೇ ಅಲೆ ಎದುರಿಸಲು ದಾನಿಗಳು ನೀಡುತ್ತಿರುವ ವೈದ್ಯಕೀಯ ಉಪಕರಣವನ್ನು ಕಿಮ್ಸ್​ ಆಸ್ಪತ್ರೆ ಬಳಸಿಕೊಳ್ಳುತ್ತಿಲ್ಲ ಎನ್ನು ಆರೋಪ ಕೇಳಿಬಂದಿದೆ.

ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಹೋದ್ರು, ಬೆಡ್​ ಖಾಲಿಯಿಲ್ಲ ಎನ್ನುವ ಬೋರ್ಡ್​ಗಳು ಎದ್ದು ಕಾಣುತ್ತದೆ. ಆದರೆ ಕಿಮ್ಸ್​ ಆಸ್ಪತ್ರೆಯಲ್ಲಿ ಮಾತ್ರ ಹಾಸಿಗೆಗಳು ಧೂಳು ತಿನ್ನುತ್ತಿವೆ ಎನ್ನಲಾಗಿದೆ.

ಧಾರವಾಡ ಜಿಲ್ಲಾಡಳಿತ ಹಾಗೂ ಕಿಮ್ಸ್​ ಆಸ್ಪತ್ರೆಗೆ ಜಿಲ್ಲೆಯ ಅನೇಕ ದಾನಿಗಳು ನೂರಾರು ಹಾಸಿಗೆ ಸೇರಿದಂತೆ ವೈದ್ಯಕೀಯ ಉಪರಣಗಳನ್ನು ನೀಡಿದ್ದಾರೆ. ಆದರೆ ಆಸ್ಪತ್ರೆ ಮಾತ್ರ ಇದರ ಸದುಪಯೋಗ ಪಡಿಸಿಕೊಳ್ಳದೇ ಕೀಮ್ಸ್ ಆಸ್ಪತ್ರೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಬೇಕಾ ಬಿಟ್ಟಿ ಎಸೆದಿದ್ದು, ಬೆಡ್​ಗಳಿಗೆ ಧೂಳು ಹಿಡಿದಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Next Story

RELATED STORIES